ಮಲ್ಪೆ ಸಮುದ್ರ ತೀರದಲ್ಲಿ ಬಲೆಗೆ ಬಿದ್ದ ಆಮೆ ರಕ್ಷಣೆ

ಮೀನುಗಾರಿಕಾ ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಆಮೆ
ಮೀನುಗಾರಿಕಾ ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಆಮೆ
Published on
ಉಡುಪಿ: ಮಲ್ಪೆ ಕಡಲತೀರದಲ್ಲಿ ಮೀನುಗಾರಿಕಾ ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಆಮೆಯನ್ನು ಸ್ಥಳಿಯ ಮೀನುಗಾರರೊಬ್ಬರು ರಕ್ಷಿಸಿ ಸಮುದ್ರಕ್ಕೆ ಬಿಟ್ಟಿದ್ದಾರೆ.
ಮಲ್ಪೆಯ ಹನುಮಾನ್​ ವಿಠೋಭ ಭಜನಾ ಮಂದಿರದ ಮುಂಭಾಗದ ಕಡಲತೀರದಲ್ಲಿ ಬಲೆಗೆ ಸಿಕ್ಕಿಕೊಂಡಿದ್ದ ಆಮೆಯನ್ನು ಕನ್ನಿ ಮೀನುಗಾರ ಸಂಘದ ಸಕ್ರಿಯ ಸದಸ್ಯ ಹಾಗೂ ಸ್ಥಳಿಯ ನಿವಾಸಿ ಜ್ಞಾನೇಶ್ವರ್​ ಕೋಟ್ಯಾನ್​ ಗಮನಿಸಿ ಸುರಕ್ಷಿತವಾಗಿ ದಡಕ್ಕೆ ತಂದು, ಅದರ ದೇಹಕ್ಕೆ ಸುತ್ತಿಕೊಂಡಿದ್ದ ಮೀನುಗಾರಿಕಾ ಬಲೆಗಳನ್ನು ಜಾಗರೂಕತೆಯಿಂದ ಕತ್ತರಿಸಿ ತೆರವುಗೊಳಿಸಿದರು. ಬಳಿಕ ಆಮೆಗೆ ಯಾವುದೇ ಹಾನಿಯಾಗದಂತೆ ಮತ್ತೆ ಸಮುದ್ರಕ್ಕೆ ಬಿಟ್ಟರು. ಅವರ ಸಮಯಪ್ರಜ್ಞೆ ಮತ್ತು ಪರಿಸರ ಕಾಳಜಿಯಿಂದ ಅಪರೂಪದ ಸಮುದ್ರ ಜೀವಿಯೊಂದು ಹೊಸ ಜೀವ ಪಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net