ಕೊಡಚಾದ್ರಿಯಲ್ಲಿ ಆಯತಪ್ಪಿ ಬಿದ್ದಾತನ ರಕ್ಷಣೆ

ಕೊಡಚಾದ್ರಿ ಬೆಟ್ಟ
ಕೊಡಚಾದ್ರಿ ಬೆಟ್ಟ
Published on

ಬೈಂದೂರು: ಕೊಡಚಾದ್ರಿ ಬೆಟ್ಟಕ್ಕೆ ತೆರಳಿದ್ದ ಕುಮಟಾ ಮೂಲದ ಪ್ರದೀಪ್ ಎಂಬುವರು ಬೆಟ್ಟದಲ್ಲಿ ಆಯತಪ್ಪಿ 60 ಅಡಿ ಕಂದಕಕ್ಕೆ ಬಿದ್ದಿದ್ದು, ಸ್ಥಳೀಯ ಜೀಪ್ ಚಾಲಕರು ಅವರನ್ನು ರಕ್ಷಿಸಿದ್ದಾರೆ.

ಪ್ರದೀಪ್ ಕೊಡಚಾದ್ರಿ ಬೆಟ್ಟದ ಶಂಕರಾಚಾರ್ಯ ಪೀಠ ಸಮೀಪಿಸುತ್ತಿದ್ದಂತೆ ತಲೆಸುತ್ತಿ ಕಂದಕಕ್ಕೆ ಬಿದ್ದಿದ್ದರು. ಪ್ರವಾಸಿಗರು ಪೊಲೀಸರು ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಬೆಟ್ಟದ ಬಳಿಯಿಂದ ಪ್ರದೀಪ್ ಬಿದ್ದ ಸ್ಥಳಕ್ಕೆ ಬಹುದೂರ ಇದ್ದರೂ ಸ್ಥಳೀಯ ಪ್ರವಾಸಿ ಜೀಪ್ ಚಾಲಕರು ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರದೀಪ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತಂದಿದ್ದಾರೆ. ನಂತರ ನಿಟ್ಟೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರದೀಪ್ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net