

ಕಾರ್ಕಳ: ಕಾರ್ಕಳ ತಾಲೂಕಿನ ಪರಪ್ಪು ಗ್ರಾಮದಲ್ಲಿ ಹಸುವನ್ನು ಅಟ್ಟಿಸಿಕೊಂಡು ಬಂದ ಗೂಳಿಯೊಂದು ಆಯತಪ್ಪಿ ಬಾವಿಗೆ ಬಿದ್ದಿದೆ. ಗ್ರಾಮದ ರತ್ನಾ ಆಚಾರ್ಯ ಅವರ ಬಾವಿಗೆ ಬಿದ್ದ ಭಾರಿ ಗಾತ್ರದ ಗೂಳಿ ಪ್ರಾಣಭಯದಿಂದ ಒದ್ದಾಡಲು ಆರಂಭಿಸಿತ್ತು. ಇದನ್ನು ಕಂಡು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ವಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಕಾರ್ಕಳ ಅಗ್ನಿಶಾಮಕ ದಳದ ಚಂದ್ರಶೇಖರ್ ನೇತೃತ್ವದ ತಂಡ ಗೂಳಿಯನ್ನು ಮೇಲಕ್ಕೆತ್ತಿದರು. ಇವರಿಗೆ ಸ್ಥಳೀಯ ಯುವಕ ಗಣೇಶ್ ಆಚಾರ್ಯ ಸಹಕರಿಸಿದರು. ಬಳಿಕ ಗೂಳಿಯನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.