ಬಾವಿಗೆ ಬಿದ್ದ ಬಾಲಕನ ರಕ್ಷಣೆ

Rescue
Rescue
Published on

ಕಾಸರಗೋಡು: ಓಣಂ ಆಚರಣೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ 15ರ ಹರೆಯದ ಬಾಲಕ ಆವರಣವಿಲ್ಲದ ಬಾವಿಗೆ ಬಿದ್ದಿದ್ದು ಆತನನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ.

ಪುಲ್ಲಾಂಜಿಪ್ಪಾರ ನಿವಾಸಿ ಸನೂಪ್ ಗುರುವಾರ ರಾತ್ರಿ ಚೀಮೇನಿ ಚೆಂಬ್ರಕಾನದಲ್ಲಿ ಆಯೋಜಿಸಿದ್ದ ಓಣಂ ಹಬ್ಬಕ್ಕೆ ಸ್ನೇಹಿತರೊಂದಿಗೆ ಬಂದಿದ್ದ. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಗೆಳೆಯರೊಂದಿಗೆ ಮೂತ್ರಶಂಕೆಗಿಂದು ಹೋದಾಗ ಆವರಣವಿಲ್ಲದ ಬಾವಿಗೆ ಬಿದ್ದಿದ್ದಾನೆ.

ಗೆಳೆಯರು ಬೊಬ್ಬೆ ಹಾಕಿದಾಗ ಅಲ್ಲಿದ್ದವರು ಸ್ಥಳಕ್ಕೆ ಆಗಮಿಸಿ ಬಾಲಕನನ್ನು ಮೇಲೆತ್ತಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕದಳ ಸಿಬ್ಬಂದಿ ಧಾವಿಸಿ ಬಾಲಕನನ್ನು ಮೇಲೆತ್ತಿ ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net