ಮತಾಂತರ ನಿಷೇಧ ಕಾಯ್ದೆ ರದ್ದುಗೊಳಿಸಿ

ಮತಾಂತರ ಕಾಯ್ದೆ ನಿಷೇಧಿಸುವಂತೆ ಆಗ್ರಹಿಸಿ ಧರ್ಮಪ್ರಾಂತ್ಯ ಕಥೊಲಿಕ್​ ಸಭಾ ಉಡುಪಿ ಪ್ರದೇಶದ ವತಿಯಿಂದ ಉಡುಪಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮೆಲ್ವಿನ್​ ಆರಾನ್ಹಾ, ಜುಲಿಯೆಟ್​ ಡಿಸೋಜಾ, ಗ್ಯಾರಿಫಿಲ್ಡ್​ ಉರ್ಬಾನ್​ ಲೂವಿಸ್​, ಲೂಯಿಸ್​ ಡಿಸೋಜಾ, ವಲೇರಿಯನ್​ ಫೆರ್ನಾಂಡಿಸ್​, ಡಾ. ಜೆರಾಲ್ಡ್​ ಪಿಂಟೊ, ಪ್ರೊ. ಫಣಿರಾಜ ಇದ್ದರು.
ಮತಾಂತರ ಕಾಯ್ದೆ ನಿಷೇಧಿಸುವಂತೆ ಆಗ್ರಹಿಸಿ ಧರ್ಮಪ್ರಾಂತ್ಯ ಕಥೊಲಿಕ್​ ಸಭಾ ಉಡುಪಿ ಪ್ರದೇಶದ ವತಿಯಿಂದ ಉಡುಪಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮೆಲ್ವಿನ್​ ಆರಾನ್ಹಾ, ಜುಲಿಯೆಟ್​ ಡಿಸೋಜಾ, ಗ್ಯಾರಿಫಿಲ್ಡ್​ ಉರ್ಬಾನ್​ ಲೂವಿಸ್​, ಲೂಯಿಸ್​ ಡಿಸೋಜಾ, ವಲೇರಿಯನ್​ ಫೆರ್ನಾಂಡಿಸ್​, ಡಾ. ಜೆರಾಲ್ಡ್​ ಪಿಂಟೊ, ಪ್ರೊ. ಫಣಿರಾಜ ಇದ್ದರು.
Published on: 

* ಕಥೊಲಿಕ್​ ಸಭಾ ಉಡುಪಿ ಪ್ರದೇಶ ಆಗ್ರಹ

* ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಅಧ್ಯಕ್ಷ ಮೆಲ್ವಿನ್​ ಆರಾನ್ಹಾ ಮನವಿ

ಉಡುಪಿ: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣಾ ಕಾಯ್ದೆ-2022 (ಮತಾಂತರ ನಿಷೇಧ ಕಾಯ್ದೆ) ರದ್ದುಗೊಳಿಸುವುದರೊಂದಿಗೆ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ದುರ್ಬಲ ಸಮುದಾಯಗಳು ರಕ್ಷಿಸಬೇಕಿದೆ. ಇವರನ್ನು ಗುರಿಯಾಗಿಸಿ ನಡೆಯುತ್ತಿರುವ ದ್ವೇಷಪೂರಿತ ಭಾಷಣ, ಕೋಮುವಾದಿ ಪ್ರಚೋದನೆ ಮತ್ತು ಹಿಂಸಾಚಾರದ ವಿರುದ್ಧ ಸಮಗ್ರ ರಕ್ಷಣಾ ನೀತಿ ರೂಪಿಸುವಂತೆ ಕ್ರೈಸ್ತ ಧರ್ಮಪ್ರಾಂತ್ಯ ಕಥೊಲಿಕ್​ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಮೆಲ್ವಿನ್​ ಆರಾನ್ಹಾ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಉಡುಪಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಡ.ಕೆ. ಶಿವಕುಮಾರ ಅವರಿಗೆ ಗುರುವಾರ ಮನವಿ ಸಲ್ಲಿಸಿ ಮಾತನಾಡಿದರು.

ಮತಾಂತರ ನಿಷೇಧ ಕಾಯ್ದೆಯಿಂದ ಧಾರ್ಮಿಕ ಅಲ್ಪಸಂಖ್ಯಾತರ ಮೂಲ ಹಕ್ಕುಗಳು, ಧಾರ್ಮಿಕ ಗುರುತು ಮತ್ತು ನಂಬಿಕೆಯ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಲ್ಲದೆ, ಧಾರ್ಮಿಕ ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಅಪರಾಧೀಕರಿಸುವ ಅಪಾಯ ಹೊಂದಿದೆ. ಸಂವಿಧಾನವು ಖಾತರಿಪಡಿಸಿರುವ ಆತ್ಮಸಾಕ್ಷಿಯ ಸ್ವಾತಂತ್ರ್ಯ ದುರ್ಬಲಗೊಳಿಸುತ್ತದೆ. ಇದು ವಿಶೇಷವಾಗಿ ಕೆಸ್ತ ಸಮುದಾಯದ ಧಾರ್ಮಿಕ ಗುರುತು, ನಂಬಿಕೆ ಹಾಗೂ ಆಚರಣೆಗಳಿಗೂ ರ್ನಿಬಂಧ ಹೇರುವಂತಿವೆ ಎಂದರು.

ಭಾರತೀಯ ಸಂವಿಧಾನದ ವಿಧಿ-25ರ ಅಡಿಯಲ್ಲಿ ಪ್ರತಿಯೊಬ್ಬರಿಗೂ ಧರ್ಮ ನಂಬುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕಿದೆ. ಆದರೆ, ಪ್ರಸ್ತುತ ಕಾಯ್ದೆಯ ವ್ಯಾಪಕ ರ್ನಿಬಂಧ, ನಿಯಮಾವಳಿಗಳು ಶಾಸಕಾಂಗದ ಅಧಿಕಾರದ ಮಿತಿ ಮೀರುವ ಸಾಧ್ಯತೆ ಇದೆ. ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳ ವಿಚಾರದಲ್ಲಿ ಕ್ರಿಮಿನಲ್​ ಮೊಕದ್ದಮೆಯ ಭಯದ ವಾತಾವರಣ ನಿರ್ಮಾಣವಾಗಲಿದೆ. ವ್ಯಕ್ತಿಗಳು ಮತ್ತು ಸಮುದಾಯ ತಮ್ಮ ಧಾರ್ಮಿಕ ನಂಬಿಕೆಗಳ ನ್ಯಾಯಸಮ್ಮತತೆಯನ್ನು ನಿರಂತರವಾಗಿ ಸಮರ್ಥಿಸಿಕೊಳ್ಳಬೇಕಾದ ಪರಿಸ್ಥಿತಿ ನಿಮಾರ್ಣವಾದರೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅರ್ಥವಿರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಥೊಲಿಕ್​ ಸಭಾ ಉಡುಪಿ ಪ್ರದೇಶದ ಕಾರ್ಯದರ್ಶಿ ಜುಲಿಯೆಟ್​ ಡಿಸೋಜಾ, ಕೋಶಾಧಿಕಾರಿ ಗ್ಯಾರಿಫಿಲ್ಡ್​ ಉರ್ಬಾನ್​ ಲೂವಿಸ್​, ನಿಯೋಜಿತ ಅಧ್ಯಕ್ಷ ಲೂಯಿಸ್​ ಡಿಸೋಜಾ, ಮಾಜಿ ಅಧ್ಯಕ್ಷರಾದ ವಲೇರಿಯನ್​ ಫೆರ್ನಾಂಡಿಸ್​, ಡಾ. ಜೆರಾಲ್ಡ್​ ಪಿಂಟೊ, ಸಹಬಾಳ್ವೆ ಸಂಸ್ಥೆಯ ಪ್ರೊ. ಫಣಿರಾಜ ಉಪಸ್ಥಿತರಿದ್ದರು.