ಅಪಾಯಕಾರಿ ಮರಗಳ ತೆರವು

 ಅರಣ್ಯ ಇಲಾಖೆ ಅಪಾಯಕಾರಿ ಮರಗಳ ತೆರವಿಗೆ ಮುಂದಾಗಿರುವುದು.
ಅರಣ್ಯ ಇಲಾಖೆ ಅಪಾಯಕಾರಿ ಮರಗಳ ತೆರವಿಗೆ ಮುಂದಾಗಿರುವುದು.
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಹೆಬ್ರಿಯ ಬ್ರಹ್ಮಾವರ ರಸ್ತೆಯಲ್ಲಿ ಮರ ಕಾರಿನ ಮೇಲೆ ಬಿದ್ದು ಕಳ್ತೂರಿನ ಸದಾನಂದ ನಾಯಕ್ ಪ್ರಾಣ ಕಳೆದುಕೊಂಡ ಬಳಿಕ ಹೆಬ್ರಿ ವಲಯ ಅರಣ್ಯಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಇರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಬಹುತೇಕ ಕಡೆಯಲ್ಲಿ ಅರಣ್ಯಾಧಿಕಾರಿಗಳು ಸರ್ವೇ ನಡೆಸಿ ಅಪಾಯಕಾರಿ ಮರಗಳ ಪಟ್ಟಿ ತಯಾರಿಸುವ ಕಾರ್ಯ ನಡೆಸುತ್ತಿದ್ದಾರೆ. ಮುದ್ರಾಡಿ ಪ್ರೌಢಶಾಲೆ ಬಳಿಯಲ್ಲಿ ಹಾಗೂ ಹೆಬ್ರಿ ಬ್ರಹ್ಮಾವರ ರಸ್ತೆಯ ವಿವಿಧೆಡೆಯಲ್ಲಿದ್ದ ಅಪಾಯಕಾರಿ ಮರಗಳನ್ನು ತೆರವು ಗೊಳಿಸಲಾಗಿದೆ.
ಹೆಬ್ರಿ ತಾಲೂಕು ರೆಡ್ ಕ್ರಾಸ್ ಸೊಸೈಟಿ ಇತ್ತೀಚೆಗೆ ಅಪಾಯಕಾರಿ ಮರಗಳ ತೆರವಿಗೆ ಅರಣ್ಯಾಧಿಕಾರಿಯನ್ನು ಒತ್ತಾಯಿಸಿತ್ತು. ಸಾವಾಜಿಕ ಹೋರಾಟಗಾರರಾದ ಕುಚ್ಚೂರು ಶ್ರೀಕಾಂತ್ ಪೂಜಾರಿ, ಮಿಥುನ್ ಶೆಟ್ಟಿ ಚಾರ, ಶಂಕರ ಶೇರಿಗಾರ್ ಹೆಬ್ರಿ, ಕನ್ಯಾನ ಸಂತೋಷ್ ನಾಯಕ್, ಪ್ರವೀಣ್ ಸೂಡ ಕೆರೆಬೆಟ್ಟು, ಪ್ರಶಾಂತ್ ಪೈ ಮುದ್ರಾಡಿ, ಪ್ರೀತಮ್ ಜೆ.ಶೆಟ್ಟಿ ಮುದ್ರಾಡಿ, ಅಣ್ಣಪ್ಪ ಕುಲಾಲ್ ಮಂಡಾಡಿಜಡ್ಡು, ಕೆರೆಬೆಟ್ಟು ಸಂಜೀವ ಶೆಟ್ಟಿ, ಸನತ್ ಕುವಾರ ಶೆಟ್ಟಿ ಬೇಳಂಜೆ, ವಕೀಲ ಕೃಷ್ಣ ಶೆಟ್ಟಿ, ರವಿ ಬೇಳಂಜೆ ಸೇರಿದಂತೆ ಹಲವರು ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದರು.

ಇನ್ನೂ ಇವೆ ಒಣಗಿದ ವೃಕ್ಷಗಳು

ಮುದ್ರಾಡಿ ಪಾದೆಗುಡ್ಡೆ, ಭೀಮ ನಗರ, ಕೆಲಕಿಲ, ಉಪ್ಪಳ, ಭಕ್ರೆ ಎಂಬಲ್ಲಿ ಅಪಾಯಕಾರಿ ಹಾಗೂ ಒಣಗಿ ಬೀಳುವ ಸ್ಥಿತಿಯಲ್ಲಿರುವ ಮರಗಳಿವೆ ಎಂದು ಪ್ರೀತಮ್ ಜೆ.ಶೆಟ್ಟಿ ತಿಳಿಸಿದ್ದಾರೆ. ಬೇಳಂಜೆಯ ತೆಂಕಹೊಲ, ಕೆಪ್ಪೆಕೆರೆ, ಸಳ್ಳೇಕಟ್ಟೆ ಪರಿಸರದಲ್ಲಿ ಅಪಾಯಕಾರಿ ಮರಗಳಿರುವ ಬಗ್ಗೆ ಸನತ್ ಕುವಾರ್ ಶೆಟ್ಟಿ ವಾಹಿತಿ ನೀಡಿದ್ದಾರೆ. ಹೆಬ್ರಿ-ಉಡುಪಿ ರಸ್ತೆಯ ಎಸ್.ಕೆ.ಫರ್ನಿಚರ್ ಬಳಿ ಒಣಗಿರುವ ಹೆಮ್ಮರ ಬೀಳುವ ಹಂತದಲ್ಲಿದೆ ಎಂದು ಹೆಬ್ರಿ ಗ್ರಾಮ ಪಂಚಾಯಿತಿ ವಾಜಿ ಸದಸ್ಯ ಕನ್ಯಾನ ಸಂತೋಷ್ ನಾಯಕ್ ತಿಳಿಸಿದ್ದಾರೆ. ಹೆಬ್ರಿಯ ಕಾರ್ಕಳ ರಸ್ತೆಯ ಗಿಲ್ಲಾಳಿ ಬಸ್ ನಿಲ್ದಾಣದ ಬಳಿ ಅಪಾಯಕಾರಿ ಮರಗಳು, ಶಿವಪುರ ಗೋಳಿಕಟ್ಟೆ ರಸ್ತೆಗೆ ವಾಲಿಕೊಂಡಿವೆ ಎಂದು ಸ್ಥಳೀಯರು ವಾಹಿತಿ ನೀಡಿದ್ದಾರೆ. ಈ ಬಗ್ಗೆ ‘ವಿಜಯವಾಣಿ’ಯಲ್ಲಿ ವರದಿ ಪ್ರಕಟಿಸಲಾಗಿತ್ತು.

ಪ್ರಮುಖ ರಸ್ತೆಗಳಲ್ಲಿ ಅಪಾಯ!

ಹೆಬ್ರಿ ಪರಿಸರದ ಪ್ರಮುಖ ರಸ್ತೆಗಳಲ್ಲಿ, ಗ್ರಾಮೀಣ ರಸ್ತೆ, ಗ್ರಾಮ ಪಂಚಾಯಿತಿ ರಸ್ತೆಗಳ ಇಕ್ಕೆಲಗಳಲ್ಲಿ ವಾಲಿಕೊಂಡಿರುವ, ಒಣಗಿರುವ, ಟೊಳ್ಳಾಗಿರುವ ಮರಗಳು ಅಪಾಯಕಾರಿಯಾಗಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಸರ್ವೇ ನಡೆಸಿ ಮರಗಳ ತೆರವು ಕಾರ್ಯವನ್ನು ನಡೆಸಲು ಒತ್ತಾಯ ಕೇಳಿ ಬಂದಿದೆ. ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಪ್ರಕೃತಿ ವಿಕೋಪದ ವಿಶೇಷ ಸಭೆಯಲ್ಲಿ ಸಚಿವ ಯು.ಟಿ.ಖಾದರ್ ಮತ್ತು ಕಾರ್ಕಳ ಶಾಸಕ ಸುನೀಲ್ ಕುವಾರ್ ಅಪಾಯಕಾರಿ ಮರಗಳನ್ನು ಶ್ರೀವಾಗಿ ತೆರವುಗೊಳಿಸಲು ಖಡಕ್ ಸೂಚನೆ ನೀಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net