ಜೀವನದಲ್ಲಿ ಸಮಸ್ಯೆಯಾದಾಗ ಕೃಷಿ ನೆನಪು

 ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಎದುರು ‘ಕಿಸಾನ್ ಗೋಷ್ಠಿ’ ಮತ್ತು ‘ಕೆಸರ್‌ಡೊಂಜಿ ದಿನ’ದ ಸಭಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಾಸಕ ಡಾ.ಭರತ್ ಶೆಟ್ಟಿ, ಶ್ರೀ ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್ ಮಂಗಳೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಕೆ. ಆರ್. ಮೊದಲಾದವರಿದ್ದರು.
ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಎದುರು ‘ಕಿಸಾನ್ ಗೋಷ್ಠಿ’ ಮತ್ತು ‘ಕೆಸರ್‌ಡೊಂಜಿ ದಿನ’ದ ಸಭಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಾಸಕ ಡಾ.ಭರತ್ ಶೆಟ್ಟಿ, ಶ್ರೀ ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್ ಮಂಗಳೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಕೆ. ಆರ್. ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ರೈತರಿಗೆ ಉತ್ತೇಜನ ನೀಡುವ ಕೆಲಸ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ಮತ್ತು ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿದೆ. ಜೀವನದಲ್ಲಿ ಸಮಸ್ಯೆಯಾದಾಗ ಕೃಷಿ ನೆನಪಾಗುತ್ತದೆ. ಉದ್ಯಮಗಳು ಏನೇ ಬರಲಿ, ಕಲ್ಲು-ಮಣ್ಣು ತಿಂದು ಮನುಷ್ಯ ಬದುಕಲಾರ ಎಂಬರಿವು ನಮ್ಮಲ್ಲಿರಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಕೃಷಿ ಇಲಾಖೆ ಮಂಗಳೂರು, ಗುರುಪುರ ವ್ಯ.ಸೇ.ಸ.ಸಂಘ, ವಾಮಂಜೂರು ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ ಜಂಟಿ ಆಶ್ರಯದಲ್ಲಿ 2026-27ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಉಪ ಅಭಿಯಾನ ‘ಆತ್ಮ’(ಎಟಿಎಂಎ) ಯೋಜನೆಯಡಿ ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಎದುರು ಶನಿವಾರ ‘ಕಿಸಾನ್ ಗೋಷ್ಠಿ’ ಮತ್ತು ‘ಕೆಸರ್‌ಡೊಂಜಿ ದಿನ’ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀ ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್ ಆಶೀರ್ವಚನ ನೀಡಿದರು. ಮಂಗಳೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಕೆ. ಆರ್.‘ಆತ್ಮ’ ಯೋಜನೆಯ ಬಗ್ಗೆ ವಿವರಿಸಿದರು. ಗುರುಪುರ ವ್ಯ.ಸೇ.ಸ.ಸಂಘದ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ ಮಾತನಾಡಿದರು.
ಶಾಸಕರಾದ ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಹಾಗೂ ಇತರ ಗಣ್ಯರಿಗೆ ಗೌರವಾರ್ಪಣೆ, ಯಶಸ್ವಿ ಕೃಷಿಕರನ್ನು ಸನ್ಮಾನಿಸಲಾಯಿತು. ಬೆಳೆ ಸಮೀಕ್ಷೆ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಫಲಾನುಭವಿಗಳಿಗೆ ಸಲಕರಣೆ ವಿತರಿಸಲಾಯಿತು.
ಅಶ್ವಿನ್ ಶೆಟ್ಟಿ ಬೊಂಡಂತಿಲ ಸ್ವಾಗತಿಸಿ, ಗೋಕುಲದಾಸ್ ಶೆಟ್ಟಿ ಮತ್ತು ಶ್ರೀದೇವಿ ನಿರೂಪಿಸಿದರು. ಶ್ರೀ ಅಮೃತೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪೂರ್ಣಚಂದ್ರ ತೇಜಸ್ವಿ, ವಿಜ್ಞಾನ ಕೇಂದ್ರದ ಡಾ.ಕೇದಾರನಾಥ, ತೋಟಗಾರಿಕೆ ಅಧಿಕಾರಿ ಕೆ.ಪ್ರವೀಣ್, ಪಶು ವೈದ್ಯಾಧಿಕಾರಿ ಡಾ.ಅಶೋಕ್ ಕೆ.ಆರ್., ಶೆಡ್ಡೆ ಮಂಜುನಾಥ ಭಂಡಾರಿ, ಪ್ರಗತಿಪರ ಕೃಷಿಕ ಮನೋಹರ ಶೆಟ್ಟಿ, ವಿನೋದ್ ಮಾಡ, ಪದ್ಮನಾಭ ಕೋಟ್ಯಾನ್(ಬಿಎಲ್‌ಪಿ), ಶಶಿಧರ ಹೆಗ್ಡೆ, ಭಾಸ್ಕರ್ ಕೆ., ಹೇಮಲತಾ ಆರ್.ಸಾಲ್ಯಾನ್, ಬಿ.ಚಂದ್ರಹಾಸ ರೈ, ಕೆ.ವಿ.ಶೆಟ್ಟಿ, ಫ್ರಾನ್ಸಿಸ್ ಕುಟಿನ್ಹೊ, ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ಸಂಘದ ನಿರ್ದೇಶಕರು, ಪ್ರತಿಷ್ಠಾನದ ಪದಾಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net