ಸಾಮಾಜಿಕ ಕಾರ್ಯಗಳಿಗೆ ಧಾರ್ಮಿಕ ಕೇಂದ್ರ ಪ್ರೇರಣೆ

 ಶರವೂರು ಶ್ರೀ ದುರ್ಗಾಪರಮೆಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾವು ಹೇಮನಾಥ ಶೆಟ್ಟಿ, ಡಾ.ಹೇಮಂತ್ ರೈ ಮನವಳಿಕೆಗುತ್ತು ಇತರರಿದ್ದರು.
ಶರವೂರು ಶ್ರೀ ದುರ್ಗಾಪರಮೆಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾವು ಹೇಮನಾಥ ಶೆಟ್ಟಿ, ಡಾ.ಹೇಮಂತ್ ರೈ ಮನವಳಿಕೆಗುತ್ತು ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಡಬ
ಸನಾತನ ಹಿಂದೂ ಧರ್ಮದ ಪ್ರೇರಣೆಯಂತೆ ಪರಸ್ಪರ ಹೊಂದಾಣಿಕೆ ಪ್ರೀತಿ ವಿಶ್ವಾಸದೊಂದಿಗೆ ಸವಾಜಮುಖಿ ಕಾರ್ಯಗಳನ್ನು ನಡೆಸಲು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪ್ರೇರೇಪಿಸುತ್ತವೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಬ್ರಹ್ಮಕಲಶೋತ್ಸವ ಪ್ರಯುಕ್ತ ಶರವೂರು ಶ್ರೀದುರ್ಗಾಪರಮೆಶ್ವರಿ ದೇವಸ್ಥಾನಕ್ಕೆ ದೇವಾಡಿಗ ಸುಧಾರಕರ ಸಂದ ಆಲಂಕಾರು ಕಡಬ ವಲಯ ಹಾಗೂ ಸಮಸ್ತ ದೇವಾಡಿಗ ಸಮುದಾಯದವರು ನೀಡಿದ ಪುಷ್ಪರಥ ಹಾಗೂ ಪಲ್ಲಕ್ಕಿಯನ್ನು ಬುಧವಾರ ಶ್ರೀ ಕ್ಷೇತ್ರಕ್ಕೆ ಸಮರ್ಪಿಸಿ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ದೇವಾಲಯದ ಪವಿತ್ರಪಾಣಿ ಎನ್.ಹರೀಶ ಆಚಾರ್ಯ ನಗ್ರಿಗುತ್ತು ದೀಪ ಪ್ರಜ್ವಲನೆ ಮಾಡಿದರು. ಮುಖ್ಯ ಅತಿಥಿ ಪುತ್ತೂರು ಕೊಂಬೆಟ್ಟುವಿನ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಮುಂಬೈ ದೇವಾಡಿಗ ಸಂದ ಅಧ್ಯಕ್ಷ ರವಿ ದೇವಾಡಿಗ ಮಾತನಾಡಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಅಣ್ಣು ದೇವಾಡಿಗ ಧರ್ಮಸ್ಥಳ, ಪ್ರಶಾಂತ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಹೇಮಂತ್ ರೈ ಮನವಳಿಕೆಗುತ್ತು ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ಗೋಪಾಲಕೃಷ್ಣ ಪಡ್ಡಿಲ್ಲಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ರಾವ್, ವಾಜಿ ಶಾಸಕಿ ಶಕುಂತಳಾ ಶೆಟ್ಟಿ, ದೇವಾಡಿಗ ಸುಧಾರಕ ಸಂ ಆಲಂಕಾರು ಕಡಬ ವಲಯದ ಅಧ್ಯಕ್ಷ ಎನ್.ರಾಮಚಂದ್ರ ದೇವಾಡಿಗ ನಗ್ರಿ, ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ.ಜಯರಾಜ್ ರೈ, ಪ್ರಮುಖರಾದ ಗಣರಾಜ್ ಕೆ. ದೇವಾಡಿಗ, ನಾಗಪ್ಪ ಗೌಡ ಮರುವಂತಿಲ, ಪ್ರಶಾಂತ ದೇವಾಡಿಗ ಅಳದಂಗಡಿ, ಅಶೋಕ್ ಮೊಲಿ, ಚಂದ್ರ ದೇವಾಡಿಗ, ರಾಧಾಕೃಷ್ಣ, ಭಾಸ್ಕರ ಗೌಡ ಇಡಾಲ, ಪುರಂದರ ರೈ ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕ ಗಣರಾಜ ಕುಂಬ್ಳೆ ಸ್ವಾಗತಿಸಿದರು. ಶಿಕ್ಷಕ ನಾರಾಯಣ ಭಟ್ ವಂದಿಸಿದರು. ಗಣೇಶ್ ಹಿರಿಂಜ ಕಾರ್ಯಕ್ರಮ ನಿರೂಪಿಸಿದರು. ಸಂದ ಕಾರ್ಯದರ್ಶಿ ಚಂದ್ರಶೇಖರ ದೇವಾಡಿಗ ಬಿ., ಕೋಶಾಧಿಕಾರಿ ಶಿವಾನಂದ ದೇವಾಡಿಗ, ಜತೆ ಕಾರ್ಯದರ್ಶಿ ಉಮೇಶ್ ದೇವಾಡಿಗ, ಉಪ ಕಾರ್ಯದರ್ಶಿ ಪ್ರೀತಮ್ ದೇವಾಡಿಗ, ಸಂಟನಾ ಕಾರ್ಯದರ್ಶಿ ಹರಿಶ್ಚಂದ್ರ ದೇವಾಡಿಗ, ಸಂಚಾಲಕ ಅಶೋಕ್ ಕುವಾರ್ ಎನ್. ಸಹಕರಿಸಿದರು.

ಕ್ಷೇತ್ರದ ಸಾನ್ನಿಧ್ಯ ಕಡಿಮೆಯಾದಾಗ ಬ್ರಹ್ಮಕಲಶ ನಡೆಸಿ ಮತ್ತೆ ಕ್ಷೇತ್ರದಲ್ಲಿ ಸಾನ್ನಿಧ್ಯ ಮರುಸ್ಥಾಪಿಸುವುದು ಬ್ರಹ್ಮಕಲಶದ ಮೂಲ ಉದ್ದೇಶ. ಬ್ರಹ್ಮಕಲಶ ಸೀಮೆಯ ಭಕ್ತರನ್ನು ಒಂದುಗೂಡಿಸುವ ಜತೆಗೆ ಕ್ಷೇತ್ರದ ಮೇಲಿನ ಭಯ ಭಕ್ತಿ ಇಮ್ಮಡಿಗೊಳಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net