ಶಾಲಾ ಬಸ್‌ಗಳ ನಿಯಮಿತ ನಿರ್ವಹಣೆ ಅಗತ್ಯ

 ರಸ್ತೆ ಸುರಕ್ಷತೆ ಬಗ್ಗೆ ದ.ಕ. ಜಿಲ್ಲೆಯ ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯಸ್ಥರಿಗೆ ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ನಡೆದ ಅರಿವು ಕಾರ್ಯಕ್ರಮದಲ್ಲಿ ಮಂಗಳೂರು ಉಪಸಾರಿಗೆ ಆಯುಕ್ತ ಮುರುಗೇಂದ್ರ ಶಿರೋಳ್ಕರ್ ವಾತನಾಡಿದರು. ಎಸ್.ಎಸ್.ಪಾಷಾ, ಅನಂತಪದ್ಮನಾಭ ಕೆ.ಪಿ., ಲಕ್ಷ್ಮೀನಾರಾಯಣ್ ಇತರರು ಇದ್ದರು.
ರಸ್ತೆ ಸುರಕ್ಷತೆ ಬಗ್ಗೆ ದ.ಕ. ಜಿಲ್ಲೆಯ ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯಸ್ಥರಿಗೆ ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ನಡೆದ ಅರಿವು ಕಾರ್ಯಕ್ರಮದಲ್ಲಿ ಮಂಗಳೂರು ಉಪಸಾರಿಗೆ ಆಯುಕ್ತ ಮುರುಗೇಂದ್ರ ಶಿರೋಳ್ಕರ್ ವಾತನಾಡಿದರು. ಎಸ್.ಎಸ್.ಪಾಷಾ, ಅನಂತಪದ್ಮನಾಭ ಕೆ.ಪಿ., ಲಕ್ಷ್ಮೀನಾರಾಯಣ್ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಮಕ್ಕಳ ಸುರಕ್ಷತೆ ಬಹಳ ಮುಖ್ಯವಾಗಿರುವುದರಿಂದ ಶಾಲಾ ಬಸ್‌ಗಳ ನಿರ್ವಹಣೆಯನ್ನು ನಿಯಮಿತವಾಗಿ ವಾಡಲೇಬೇಕು. ನಿಯವಾವಳಿಯನ್ನು ಎಲ್ಲ ಶಿಕ್ಷಣ ಸಂಸ್ಥೆಗಳು ಕಡ್ಡಾಯ ಪಾಲಿಸಬೇಕಿದ್ದು, ಉಲ್ಲಂಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು ಉಪಸಾರಿಗೆ ಆಯುಕ್ತ ಮುರುಗೇಂದ್ರ ಶಿರೋಳ್ಕರ್ ಎಚ್ಚರಿಕೆ ನೀಡಿದರು.
ದ.ಕ. ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆ ನೇತೃತ್ವದಲ್ಲಿ ರಸ್ತೆ ಸುರಕ್ಷತೆ ಕುರಿತು ಜಿಲ್ಲೆಯ ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯಸ್ಥರಿಗೆ ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶೇಷ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಪ್ರಾದೇಶಿಕ ಅಧಿಕಾರಿ ಎಸ್.ಎಸ್.ಪಾಷಾ ಭಾಗವಹಿಸಿದ್ದರು. ಬಂಟ್ವಾಳ ವೃತ್ತನಿರೀಕ್ಷಕ ಅನಂತಪದ್ಮನಾಭ ಕೆ.ಪಿ., ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಲಕ್ಷ್ಮೀನಾರಾಯಣ್, ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯ ಮುಖ್ಯಶಿಕ್ಷಕ ವಂ.ಫಾ.ಮೆಲ್ವಿನ್ ಲೋಬೋ, ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆ ಉಪನಿರೀಕ್ಷಕ ಆದರ್ಶ್ ಎ.ಎಂ., ಪ್ರಮುಖರಾದ ಎನ್.ಮಂಜುನಾಥ್, ಗೋಪಾಲಕೃಷ್ಣ ಭಟ್, ವಿದ್ಯಾಕುಮಾರಿ, ಪ್ರಮೋದ್ ಭಟ್ ಉಪಸ್ಥಿತರಿದ್ದರು. ಸುಧಾ ಸ್ವಾಗತಿಸಿದರು. ಪ್ರತಿಮಾ ವೈ.ವಿ. ಕಾರ್ಯಕ್ರಮ ನಿರೂಪಿಸಿದರು.

ಎಫ್‌ಸಿ ಮಾಡದಿದ್ದರೆ ಪ್ರಾಂಶುಪಾಲರೇ ಹೊಣೆ

ಸ್ಕೂಲ್ ಬಸ್‌ಗಳಲ್ಲಿ ಜಿಪಿಎಸ್ ಅಳವಡಿಸಬೇಕು. ವಿದ್ಯಾರ್ಥಿನಿಯರು ಇರುವ ಸ್ಕೂಲ್ ಬಸ್‌ನಲ್ಲಿ ನಿರ್ವಾಹಕಿ ಕಡ್ಡಾಯವಾಗಿ ಇರಬೇಕು. ಚಾಲಕ ಸಮವಸದಲ್ಲಿರುವಂತೆ, ಕುಡಿದು ವಾಹನ ಚಲಾಯಿಸದಂತೆ ಶಿಕ್ಷಣ ಸಂಸ್ಥೆಗಳು ನಿಗಾ ವಹಿಸಬೇಕು. ಎ್ಸಿ ಮಾಡದ ಕೆಲವು ಸ್ಕೂಲ್‌ಬಸ್‌ಗಳ ಕುರಿತು ಮಾಹಿತಿಯಿದ್ದು, ಅಂತಹ ವಾಹನಗಳನ್ನು ಜಪ್ತಿ ಮಾಡುವುದರ ಜತೆಗೆ ಪ್ರಾಂಶುಪಾಲರನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಮಂಗಳೂರು ಉಪಸಾರಿಗೆ ಆಯುಕ್ತ ಮುರುಗೇಂದ್ರ ಶಿರೋಳ್ಕರ್ ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net