ವಂದೇ ಮಾತರಂ ಪೂರ್ತಿ ಹಾಡಲು ನಿರಾಕರಣೆ ಖಂಡನೀಯ

 ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ತಿರಂಗಾ ಯಾತ್ರೆ ಅಂಗವಾಗಿ ಲೆಫ್ಟಿನೆಂಟ್ ಕರ್ನಲ್ ಮೊಹಮ್ಮದ್ ಹಶೀಮ್ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್, ಗುರುಪ್ರಸಾದ್ ಪ್ರಭು ಮತ್ತಿತರರು ಇದ್ದರು.
ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ತಿರಂಗಾ ಯಾತ್ರೆ ಅಂಗವಾಗಿ ಲೆಫ್ಟಿನೆಂಟ್ ಕರ್ನಲ್ ಮೊಹಮ್ಮದ್ ಹಶೀಮ್ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್, ಗುರುಪ್ರಸಾದ್ ಪ್ರಭು ಮತ್ತಿತರರು ಇದ್ದರು.
Published on

ಕಾಸರಗೋಡು: ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಆಶ್ರಯದಲ್ಲಿ ತಿರಂಗಾ ಯಾತ್ರೆ, ವೀರಯೋಧಗೆ ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಿತು. ನಗರದ ಕರಂದಕ್ಕಾಡಿನಿಂದ ಆರಂಭಗೊಂಡ ತಿರಂಗಾ ಯಾತ್ರೆ ನಗರದಲ್ಲಿ ಸಂಚರಿಸಿ ಪಿಲಿಕುಂಜೆಯಲ್ಲಿರುವ ಲೆಫ್ಟಿನೆಂಟ್ ಕರ್ನಲ್ ಮೊಹಮ್ಮದ್ ಹಶೀಮ್ ಯುದ್ಧ ಸ್ಮಾರಕದಲ್ಲಿ ಸಂಪನ್ನಗೊಂಡಿತು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್ ಮಾತನಾಡಿ, ಬ್ರಿಟಿಷರು ಬಂಗಾಳವನ್ನು ವಿಭಜಿಸಲು ಪ್ರಯತ್ನಿಸಿದಾಗ ಜನರು ಒಗ್ಗಟ್ಟಾಗಿ ನಿಂತು ‘ವಂದೇ ಮಾತರಂ’ ಗೀತೆಯನ್ನು ಹಾಡುವ ಮೂಲಕ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಏಕತೆ ಮತ್ತು ಶಕ್ತಿಯ ಸಂಕೇತವಾಗಿರುವ ‘ವಂದೇ ಮಾತರಂ’ ಗೀತೆಯನ್ನು ಪೂರ್ತಿಯಾಗಿ ಹಾಡಲು ನಿರಾಕರಿಸಿರುವ ಕೇರಳದ ಶಿಕ್ಷಣ ಸಚಿವರು ಭಯೋತ್ಪಾದಕರ ವಕ್ತಾರರಂತೆ ವರ್ತಿಸುತ್ತಿರುವುದು ಖಂಡನೀಯ ಎಂದರು.
ಲೆಫ್ಟಿನೆಂಟ್ ಕರ್ನಲ್ ಮೊಹಮ್ಮದ್ ಹಶೀಮ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕ್ಷೇತ್ರ ಸಮಿತಿ ಅಧ್ಯಕ್ಷ ಗುರುಪ್ರಸಾದ್ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಉಪಾಧ್ಯಕ್ಷ ಪಿ.ರಮೇಶ್, ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ದಿವ್ಯಾ, ಪುರುಷೋತ್ತಮನ್, ಶ್ರೀಧರ, ಪ್ರಸನ್ನ ಕಾರಂತ್, ವರಪ್ರಸಾದ್ ಕೊಟ್ಟಕ್ಕಣಿ, ಸಾರ್ವಜನಿಕ ಪ್ರತಿನಿಧಿಗಳಾದ ಶಾರದಾ, ಶ್ರುತಿ, ಗಣೇಶ್ ಮೀಪುಗುರಿ, ರಾಮಕೃಷ್ಣ ಹೊಳ್ಳ, ರೇಷ್ಮಾ, ಮಾಧವ, ಚಂದ್ರಶೇಖರ್, ಅನಿಲ್ ಕುಮಾರ್, ನವನೀತ ರೈ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net