

ಕಾಡು ಪ್ರಾಣಿಗಳಿಂದ ಕಷಿ ನಾಶ ಉಂಟಾಗಿದ್ದಲ್ಲಿ ಅರಣ್ಯ ಇಲಾಖೆಗೆ ವಾಹಿತಿ ಕೊಟ್ಟು ಪರಿಹಾರ ಪಡೆಯಲು ಕ್ರಮ ವಹಿಸಬೇಕು. ಕೆಲವೊಮ್ಮೆ ಅದೇ ಪ್ರಾಣಿಗಳು ನಿರ್ದಿಷ್ಟವಾಗಿ ತಿಂದಿದೆ ಎಂದು ಗುರುತಿಸಲು ಸಾಧ್ಯವಾಗುವುದಿಲ್ಲ. ರೈತರ ಪರ ನಾವಿದ್ದೇವೆ. ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ.
ನಾವು ಕೃಷಿಯಿಂದ ವಿಮುಖರಾಗುತ್ತಿದ್ದೇವೆ. ನಿರಂತರವಾಗಿ ಮಂಗಗಳ ಕಾಟದಿಂದ ತೆಂಗಿನಕಾಯಿ ಸಿಗುತ್ತಿಲ್ಲ. ಹಿಂಡು ಹಿಂಡಾಗಿ ತೋಟಕ್ಕೆ ಲಗ್ಗೆ ಇಟ್ಟು ಬೆಳೆ ಹಾಳು ವಾಡುತ್ತದೆ. ಕೃಷಿಕರ ಸಮಸ್ಯೆ ಯಾರಲ್ಲಿ ಹೇಳುವುದು.