ಕುಂದಾಪುರ: ರೆಡ್‌ಕ್ರಾಸ್ ಕೇವಲ ಸಂಸ್ಥೆಯಲ್ಲ, ಅದು ಮಾನವೀಯತೆ ಪ್ರತೀಕವಾಗಿದೆ. ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಸೇವಾ ಮನೋಭಾವ, ಸಮಾಜ ಸೇವೆ, ಆರೋಗ್ಯ ಜಾಗೃತಿ ಹಾಗೂ ಪ್ರಥಮ ಚಿಕಿತ್ಸೆ ಅರಿವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಜೂನಿಯರ್ ರೆಡ್‌ಕ್ರಾಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ತಾಲೂಕು ಘಟಕ ಅಧ್ಯಕ್ಷ ಜಯಕರ್ ಶೆಟ್ಟಿ ಹೇಳಿದರು.