ಮಂಗಳೂರು ವಿವಿ ಸಂಪರ್ಕಿಸುವ ರಾಜರಸ್ತೆ ಚತುಷ್ಪಥ ಕಾಮಗಾರಿ ಸಂದರ್ಭ ಎರಡು ವರ್ಷಗಳ ಹಿಂದೆ ರಸ್ತೆಬದಿ ಚರಂಡಿ ನಿರ್ಮಿಸುವ ನೆಪದಲ್ಲಿ ಚೆಂಬುಗುಡ್ಡೆ ಸಂಪರ್ಕ ರಸ್ತೆಯ ಮೆಟ್ಟಿಗಲುಗಳನ್ನೇ ಕಡಿದು ಹಾಕಲಾಗಿತ್ತು. ರಸ್ತೆ ಕಾಮಗಾರಿ ಮುಗಿದು ವರ್ಷ ಕಳೆದರೂ ಕಡಿದು ಹಾಕಲಾದ ಮೆಟ್ಟಿಲು ಮಾತ್ರವಲ್ಲದೆ ಚರಂಡಿಗೆ ಪೈಪ್ ಕೂಡಾ ಹಾಕದೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದರು. ಇದರಿಂದಾಗಿ ಸ್ಥಳೀಯರು ಶಾಲೆಗೆ ಹೋಗುವ ಮಕ್ಕಳು, ಹಿರಿಯರು, ಮಹಿಳೆಯರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವುದೇ ಸವಾಲಾಗಿತ್ತು.