ಮಂಜೇಶ್ವರದ ಯುವಕರು ಗುರುವಾರ ಬೆಳಗ್ಗೆ ಎರಡು ಕಾರುಗಳಲ್ಲಿ ರಾಣಿಪುರ ಬೆಟ್ಟದ ರಸ್ತೆಗೆ ಆಗಮಿಸಿದ್ದು, ಈ ವೇಳೆ ಕಾರಿನ ಬಾಗಿಲುಗಳನ್ನು ತೆರೆದು ಕಾರಿನ ಮೇಲೆ ಕುಳಿತುಕೊಂಡು ಅಪಾಯಕಾರಿಯಾಗಿ ಸಂಚರಿಸಿದ್ದಾರೆ. ಅದನ್ನು ತಮ್ಮದೇ ಮೊಬೈಲಿನಲ್ಲಿ ಚಿತ್ರೀಕರಿಸಿಕೊಂಡ ಯುವಕರು ಬಳಿಕ ಅವರೇ ರಾಣಿಪುರಂ ಪೊಲೀಸರಿಗೆ ವಾಟ್ಸ್ಯಾಪ್ ಮೂಲಕ ರವಾನಿಸಿದ್ದಾರೆ.