ಶ್ರೀ ರಾವಾಯಣ ಸುಂದರ ಕಾಂಡ ಪ್ರವಚನ ಸಪ್ತಾಹದ ಮಂಗಲೋತ್ಸವದಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸದಸ್ಯರಾದ ಗಜೇಂದ್ರ ಹೆಬ್ಬಾರ್, ಜಗದೀಶ್ ರಾವ್, ವೈ.ಎನ್.ವೆಂಕಟೇಶಮೂರ್ತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.
Published on:
Copied
Follow Us
ಕುಂದಾಪುರ: ಮೂಲ ರಾಮಾಯಣ ಒಂದು ಮಹಾಗ್ರಂಥ. ಅದರ ಅಧ್ಯಯನ ಸಾಧ್ಯವಾಗದಿದ್ದರೆ ವಾಲ್ಮೀಕಿ ರಾಮಾಯಣವನ್ನಾದರೂ ಓದಬೇಕು. ರಾವಾಯಣ ಪಠಣ ಗಾಯತ್ರಿ ಜಪದಷ್ಟೇ ಪುಣ್ಯ ನೀಡುತ್ತದೆ ಎಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಕೋಟೇಶ್ವರದ ಶ್ರೀ ಕೋದಂಡ ರಾಮ ಮಂದಿರದಲ್ಲಿ ನಿರಂತರ ಜ್ಞಾನ ಸತ್ರ ಸರಣಿ ಕಾರ್ಯಕ್ರಮ ಅಂಗವಾಗಿ ವಿದ್ವಾನ್ ಹರಿಪ್ರಸಾದ್ ಭಟ್ ಹೆರ್ಗ ಅವರಿಂದ ನಡೆದ ಶ್ರೀ ರಾಮಾಯಣ ಸುಂದರ ಕಾಂಡ ಪ್ರವಚನ ಸಪ್ತಾಹದ ಮಂಗಲೋತ್ಸವದಲ್ಲಿ ಆಶೀರ್ವಚನ ನೀಡಿದರು.
ರಮೇಶ್ ಹತ್ವಾರ್, ಶ್ರೀಪತಿ ಉಪಾಧ್ಯಾಯ ಮಾತನಾಡಿದರು. ಭಜನಾಕಾರ ಶ್ರೀನಿವಾಸ ಅಡಿಗ, ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ಶ್ರೀಲಕ್ಷ್ಮೀ ಹಾಗೂ ಲಕ್ಷ್ಮೀಶ ವರ್ಣ ದಂಪತಿಗೆ ಸ್ವಾಮೀಜಿ ಅನುಗ್ರಹ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಕೋಟೇಶ್ವರದ ಶ್ರೀ ಕೋದಂಡ ರಾಮ ಮಂದಿರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಸ್ವಾಮಿಗಳು ಸಂಸ್ಥಾನ ಪೂಜೆ ನೆರವೇರಿಸಿದರು. ಭಕ್ತರು ಭಿಕ್ಷೆ, ಪಾದಪೂಜೆ ನಡೆಸಿದರು. ವಾಲಿಕೆ ಮಂಗಳಾರತಿ ಮಾಡಲಾಯಿತು.
ಸದಸ್ಯರಾದ ಗಜೇಂದ್ರ ಹೆಬ್ಬಾರ್, ಜಗದೀಶ್ ರಾವ್, ವೈ.ಎನ್.ವೆಂಕಟೇಶಮೂರ್ತಿ ಭಟ್ ಮತ್ತಿತರರು ಉಪಸ್ಥಿತರಿದ್ದರು. ಮಂದಿರ ಸಮಿತಿ ಅಧ್ಯಕ್ಷ ಕೋಣಿ ಸತ್ಯಮೂರ್ತಿ ಸ್ವಾಗತಿಸಿದರು.