ಭಕ್ತಿಯ ಕೆಲಸಗಳಿಗೆ ದೇವರ ಅನುಗ್ರಹ ಪ್ರಾಪ್ತಿ

 ಪೆರಡಾಲದಲ್ಲಿ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಬ್ರಹ್ಮಕಲಶ ಸಮಿತಿ ಕೋಶಾಧಿಕಾರಿ ಸೂರ್ಯನಾರಾಯಣ ಬಿ. ಮಾತನಾಡಿದರು. ಪ್ರಮುಖರಾದ ವೆಂಕಟ್ರಮಣ ಭಟ್, ಜಗನ್ನಾಥ ರೈ ಪೆರಡಾಲಗುತ್ತು, ಜಯದೇವ ಖಂಡಿಗೆ, ಸೀತಾರಾಮ ನವಕಾನ ಮೊದಲಾದವರು ಉಪಸ್ಥಿತರಿದ್ದರು.
ಪೆರಡಾಲದಲ್ಲಿ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಬ್ರಹ್ಮಕಲಶ ಸಮಿತಿ ಕೋಶಾಧಿಕಾರಿ ಸೂರ್ಯನಾರಾಯಣ ಬಿ. ಮಾತನಾಡಿದರು. ಪ್ರಮುಖರಾದ ವೆಂಕಟ್ರಮಣ ಭಟ್, ಜಗನ್ನಾಥ ರೈ ಪೆರಡಾಲಗುತ್ತು, ಜಯದೇವ ಖಂಡಿಗೆ, ಸೀತಾರಾಮ ನವಕಾನ ಮೊದಲಾದವರು ಉಪಸ್ಥಿತರಿದ್ದರು.
Published on
ಬದಿಯಡ್ಕ: ಶ್ರೀ ಉದನೇಶ್ವರ ದೇವರ ಸನ್ನಿಧಿಯಲ್ಲಿ ಇತ್ತೀಚೆಗಷ್ಟೇ ಜರುಗಿದ ಬ್ರಹ್ಮಕಲಶ ಮತ್ತು ಧಾರ್ಮಿಕ ಸಾಂಸ್ಕೃತಿಕ ಉತ್ಸವ ಕೇವಲ ಒಂದು ಕಾರ್ಯಕ್ರಮವಾಗಿರಲಿಲ್ಲ, ನಮ್ಮೂರಿನ ಐಕ್ಯದ ಪ್ರತೀಕವಾಗಿತ್ತು. ಮಹೋತ್ಸವವನ್ನು ಅಡೆತಡೆಗಳಿಲ್ಲದೆ ಯಶಸ್ವಿಗೊಳಿಸಿದ ಕಾರ್ಯಕರ್ತರು ನಮ್ಮ ನಿಜವಾದ ನಾಯಕರು. ಭಕ್ತಿ ಮತ್ತು ಸೇವಾ ಮನೋಭಾವ ಒಂದಾದಾಗ ದೈವ ಸಂಕಲ್ಪಗಳು ಸಾಕಾರಗೊಳ್ಳುತ್ತವೆ ಎಂದು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಬಿ.ವಸಂತ ಪೈ ಹೇಳಿದರು.
ಪೆರಡಾಲ ಶ್ರೀ ಉದನೇಶ್ವರ ದೇವಳ ಬ್ರಹ್ಮಕಲಶ ದೃಢಕಲಶದಂದು ಕಾರ್ಯಕರ್ತರ ಅಭಿನಂದನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು, ಗೌರವಾಧ್ಯಕ್ಷ ಜಯದೇವ ಖಂಡಿಗೆ, ಮೊಕ್ತೇಸರ ಸೀತಾರಾಮ ನವಕಾನ, ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಶಿವಶಕ್ತಿ ಪೆರಡಾಲ ಅಧ್ಯಕ್ಷ ಭಾಸ್ಕರ, ಲೆಕ್ಕ ಪರಿಶೋಧಕ ಕುಞಣ್ಣ, ಉಪಾಧ್ಯಕ್ಷ ಜಗನ್ನಾಥ ರೈ, ಲೆಕ್ಕ ಪರಿಶೋಧಕ ಸತೀಶ್ ಕುಮಾರ್, ಮಾಜಿ ಮೊಕ್ತೇಸರ ಪಿ.ಜಿ.ಚಂದ್ರಹಾಸ ರೈ ಪೆರಡಾಲಗುತ್ತು, ಪ್ರೊ.ಎ.ಶ್ರೀನಾಥ್, ಜತೆ ಕಾರ್ಯದರ್ಶಿ ಗಣೇಶಪ್ರಸಾದ ಕಡಪ್ಪು, ಮಾತೃ ಸಮಿತಿ ಅಧ್ಯಕ್ಷೆ ವಿನಯಾ ಜೆ.ರೈ, ನಾಟಿ ವೈದ್ಯ ಶ್ರೀರಾಮ ಪಟ್ಟಾಜೆ ಉಪಸ್ಥಿತರಿದ್ದರು.
ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಡಾ.ಶ್ರೀಶ ಕುಮಾರ ನಿರೂಪಿಸಿದರು. ಜತೆ ಕಾರ್ಯದರ್ಶಿ ಉದಯಶಂಕರ ಪಿ.ಎಸ್. ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net