ಭಜನೆಯಿಂದ ದೇವರ ಸಾಕ್ಷಾತ್ಕಾರದ ಅನುಭೂತಿ

ಉಡುಪಿಯ ವಿಬುಧಪ್ರಿಯ ನಗರದಲ್ಲಿರುವ ಕಾಮಾಕ್ಷಿ ದೇವಿ ದೇಗುಲದಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆಯನ್ನು ಮಂಜುನಾಥ ಮಣಿಪಾಲ ಉದ್ಘಾಟಿಸಿದರು. ರತ್ನಾಕರ ಇಂದ್ರಾಳಿ, ಗುರುದಾಸ ಶೆಣೈ, ಮಾಧವಿ ಭಟ್​, ಅರುಣ ಮಲ್ಪೆ, ಮಾಯಾ ಕಾಮತ ಇದ್ದರು.
ಉಡುಪಿಯ ವಿಬುಧಪ್ರಿಯ ನಗರದಲ್ಲಿರುವ ಕಾಮಾಕ್ಷಿ ದೇವಿ ದೇಗುಲದಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆಯನ್ನು ಮಂಜುನಾಥ ಮಣಿಪಾಲ ಉದ್ಘಾಟಿಸಿದರು. ರತ್ನಾಕರ ಇಂದ್ರಾಳಿ, ಗುರುದಾಸ ಶೆಣೈ, ಮಾಧವಿ ಭಟ್​, ಅರುಣ ಮಲ್ಪೆ, ಮಾಯಾ ಕಾಮತ ಇದ್ದರು.
Published on: 

* ನಗರಸಭಾ ಮಾಜಿ ಸದಸ್ಯ ಮಂಜುನಾಥ ಮಣಿಪಾಲ ಅಭಿಪ್ರಾಯ

* ರಾಜ್ಯಮಟ್ಟದ 'ಹಾಡಿ ಭಜಿಸಿರೋ' ಭಜನಾ ಸ್ಪರ್ಧೆ ಉದ್ಘಾಟನೆ

ಉಡುಪಿ: ಮನೆಮನೆಗಳಲ್ಲಿ ಭಜನೆಯ ಮೂಲಕ ಮಾತೆಯರು ಸನಾತನ ಧರ್ಮ ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಮುಂದಿನ ಪೀಳಿಗೆ ಸದಾ ಸನ್ಮಾರ್ಗದಲ್ಲಿ ನಡೆಯುವಂತಾಗಲು ಭಜನೆ ಪೂರಕ. ಮನ:ಪೂರ್ವಕ ಭಜನೆ ಮಾಡಿದರೆ ದೇವರ ಸಾಕ್ಷಾತ್ಕಾರದ ಅನುಭೂತಿ ಲಭಿಸುತ್ತದೆ. ನವರಾತ್ರಿ ಸಂದರ್ಭದಲ್ಲಿ ಕಾಮಾಕ್ಷಿ ದೇವಿಯ ಸನ್ನಿಧಿಯಲ್ಲಿ ಭಜನಾ ಸ್ಪರ್ಧೆ ಆಯೋಜಿಸಿರುವುದು ಅರ್ಥಪೂರ್ಣ ಎಂದು ಉಡುಪಿ ನಗರಸಭೆಯ ಮಾಜಿ ಸದಸ್ಯ ಮಂಜುನಾಥ ಮಣಿಪಾಲ ತಿಳಿಸಿದರು.

ಉಡುಪಿಯ ವಿಬುಧಪ್ರಿಯ ನಗರದಲ್ಲಿರುವ ಕಾಮಾಕ್ಷಿ ದೇವಿ ದೇಗುಲದಲ್ಲಿ ನವರಾತ್ರಿ ಮಹೋತ್ಸವದ ನಿಮಿತ್ತ ಭಾನುವಾರ (ಅ.11) ಆಯೋಜಿಸಿದ್ದ 'ಹಾಡಿ ಭಜಿಸಿರೋ' ರಾಜ್ಯಮಟ್ಟದ ತಂಡ ಭಜನಾ ಸ್ಪರ್ಧೆ ಉದ್ಘಾಟಿಸಿ ಮಾತಾನಾಡಿದರು.

ಮುಖ್ಯ ಅತಿಥಿಗಳಾಗಿ ವಿದ್ವಾನ್​ ಗುರುದಾಸ ಶೆಣೈ, ವಿದುಷಿ ಮಾಧವಿ ಭಟ್​, ಭಜನಾ ಸಂಘಟಕ ಅರುಣ ಮಲ್ಪೆ, ಸ್ಪರ್ಧೆಯ ಸಂಯೋಜಕಿ ಮಾಯಾ ಕಾಮತ ಉಪಸ್ಥಿತರಿದ್ದರು.

ದೇವಸ್ಥಾನದ ಆಡಳಿತ ಮೊಕ್ತೇಸರ ರತ್ನಾಕರ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರಿಜಾ ಕಾಮತ ಕಾರ್ಯಕ್ರಮ ನಿರ್ವಹಿಸಿದರು.

ಭಜನಾ ಸ್ಪರ್ಧೆಯು ನವರಾತ್ರಿಯ ಎಲ್ಲ ದಿನಗಳಲ್ಲೂ ಸಂಜೆ 4:30ರಿಂದ ರಾತ್ರಿ 8:30ರ ವರೆಗೆ ನಡೆಯಲಿದೆ. ಒಟ್ಟು 32 ಭಜನಾ ತಂಡಗಳು ಭಾಗವಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net