ಲಾರಿಯಲ್ಲಿ ಗುರುಪುರ ಕೈಕಂಬದಿಂದ ಮಂಗಳೂರಿನತ್ತ ಸಾಗಾಟದ ಜಲ್ಲಿ ರೆಡಿಮಿಕ್ಸ್ ತುಂಬಿತ್ತು. ಇಳಿಜಾರಾದ ಪ್ರದೇಶದಲ್ಲಿ ಹೆದ್ದಾರಿ ಬದಿಗೆ ಸರಿದ ಲಾರಿ ರಸ್ತೆಯಿಂದ ಕೆಳಕ್ಕುರುಳಿದೆ. ಲಾರಿಯಿಂದ ಇಳಿಯಲು ಪ್ರಯತ್ನಿಸಿದ ಕ್ಲೀನರ್‌ನ ಕಾಲಿಗೆ ಗಾಯವಾಗಿದೆ. ಘಟನೆ ವೇಳೆ ರಸ್ತೆ ಬದಿಯ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ತಕ್ಷಣದಿಂದ ಗುರುಪುರ ಆಸುಪಾಸಿನಲ್ಲಿ ಒಂದು ತಾಸು ವಿದ್ಯುತ್ ಸ್ಥಗಿತಗೊಂಡಿತ್ತು.