ಸಾಹಿತ್ಯದ ಓದಿನಿಂದ ಆರೋಗ್ಯ ಸುರಕ್ಷಿತ

ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ರಚಿಸಿದ ತುಳುನಾಡಿನ ಆಟಿ ತಿಂಗಳು ಕೃತಿ ಬಿಡುಗಡೆಗೊಳಿಸಲಾಯಿತು. ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ನವೀನ್ ಶೆಟ್ಟಿ ಎಡ್ಮೆಮಾರ್, ಪಿ.ಕೆ.ಸದಾನಂದ ಮೊದಲಾದವರಿದ್ದರು.
ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ರಚಿಸಿದ ತುಳುನಾಡಿನ ಆಟಿ ತಿಂಗಳು ಕೃತಿ ಬಿಡುಗಡೆಗೊಳಿಸಲಾಯಿತು. ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ನವೀನ್ ಶೆಟ್ಟಿ ಎಡ್ಮೆಮಾರ್, ಪಿ.ಕೆ.ಸದಾನಂದ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಜೀವನದಲ್ಲಿ ಜ್ಞಾನವೃದ್ಧಿಗಾಗಿ ಉತ್ತಮ ಸಾಹಿತ್ಯದ ಓದುವುದು ಮತ್ತು ಬರವಣಿಗೆಗಳ ಮೂಲಕ ಆರೋಗ್ಯವನ್ನು ಕೂಡ ಸುರಕ್ಷಿತವಾಗಿಡಲು ಸಾಧ್ಯವಿದೆ. ಇಳಿ ವಯಸ್ಸಿನಲ್ಲೂ ನಿರಂತರ ಬರವಣಿಗೆ ಮೂಲಕ ಸಾಹಿತಿ ಸಾಲ್ಯಾನ್ ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.
ಮೂಲ್ಕಿಯಲ್ಲಿ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ರಚಿಸಿದ 24ನೇ ಕೃತಿ ತುಳುನಾಡಿನ ಆಟಿ ತಿಂಗಳು ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃತಿ ಬಿಡುಗಡೆಗೊಳಿಸಿದ ಟಿವಿ ನಿರೂಪಕ ನವೀನ್ ಶೆಟ್ಟಿ ಎಡ್ಮೆಮಾರ್ ಮಾತನಾಡಿ, ಕರಾವಳಿಯ ಆಟಿ ತಿಂಗಳ ಆಚರಣೆಗಳ ಸತ್ವ, ಹಾಗೂ ವೈಜ್ಞಾನಿಕ ಸತ್ಯ ತಿಳಿದುಕೊಳ್ಳುವ ಮೂಲಕ ನಮ್ಮ ಆರೋಗ್ಯ ರಕ್ಷಣೆಯೊಂದಿಗೆ ಮುಂದಿನ ಪೀಳಿಗೆಗಾಗಿ ಪುಸ್ತಕ ರಚನೆಯ ಮೂಲಕ ಸಂಗ್ರಹ ಯೋಗ್ಯ ಕೃತಿಯಾಗಿ ಹೊರಹೊಮ್ಮಿರುವುದು ಮಾದರಿ ಎಂದರು.
ಸಾಮಾಜಿಕ ಕಳಕಳಿಯ ಮೂಲಕ ಪ್ರಸಿದ್ಧಿ ಪಡೆದ ಶಿಕ್ಷಕಿ ಶೋಭಾ ಯು. ಅವರನ್ನು ಸನ್ಮಾನಿಸಲಾಯಿತು. ಪಡುಬಿದ್ರಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಿ.ಕೆ.ಸದಾನಂದ, ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಮೂಲ್ಕಿ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಹರೀಂದ್ರ ಎಸ್.ಸುವರ್ಣ, ಜಯಪಾಲ್ ಶೆಟ್ಟಿ ಐಕಳ ಮುಖ್ಯ ಅತಿಥಿಗಳಾಗಿದ್ದರು. ಕೃತಿಕರ್ತ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಕೃತಿ ಪರಿಚಯ ಮಾಡಿದರು. ದಿನೇಶ್ ಶೆಟ್ಟಿ ಸ್ವಾಗತಿಸಿದರು. ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರ್ವಹಿಸಿದರು. ವಾಸು ಪೂಜಾರಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net