ದ್ರವ ತುಂಬಿದ ಚೀಲಗಳು ಬೆಳೆದಂತೆ ರೋಗಿಗೆ ಬೆನ್ನುನೋವು, ಕಾಲುಗಳ ಸೆಳೆತದಿಂದ ನಡೆದಾಡುವುದೇ ಕಷ್ಟವಾಗುತ್ತದೆ. ಎಂಡೋಸ್ಕೋಪಿಕ್ ಸರ್ಜರಿಯಲ್ಲಿ 8 ಮಿ.ಮೀ. ಛೇಧನದ ಮೂಲಕ ಕ್ಯಾಮರಾ ಸಹಿತ ಎಂಡೋಸ್ಕೋಪಿಕ್ ಅನ್ನು ರವಾನಿಸಿ ನೋವಿಲ್ಲದೆ ದ್ರವತುಂಬಿದ ಚೀಲಗಳನ್ನು ಹೊರ ತೆಗೆಯಲಾಗುತ್ತದೆ. ಇದರಿಂದ ರೋಗಿಯೂ ಚೇತರಿಸಿಕೊಳ್ಳಲು ಮತ್ತು ದಿನನಿತ್ಯದ ಚಟುವಟಿಕೆಗಳನ್ನು ಮೊದಲಿನಂತೆಯೇ ನಡೆಸಬಹುದು ಎಂದರು.