ಬಿ.ಸಿ.ರೋಡಿನ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದಲ್ಲಿ ಆಯೋಜನೆಗೊಂಡ ವಿಶೇಷ ವಸ್ತುಪ್ರದರ್ಶನವನ್ನು ಡಾ.ರಾವೇಂದ್ರ ಹೊಳ್ಳ ಉದ್ಘಾಟಿಸಿದರು. ರುತ್ವಿಕಾ ಮಿಶ್ರಾ, ಡಾ.ತುಕಾರಾಂ ಪೂಜಾರಿ, ಮಧುಶ್ರೀ ಇತರರಿದ್ದರು.
ಬಂಟ್ವಾಳ: ಮುಂದಿನ ಪೀಳಿಗೆಗೆ ಇತಿಹಾಸ ತಲುಪಿಸುವ ಕಾರ್ಯ ನಡೆಸುತ್ತಿರುವ ರಾಣಿ ಅಬ್ಬಕ್ಕ ವಸ್ತು ಸಂಗ್ರಹಾಲಯವನ್ನು ಐಎಫ್‌ಎ ಮತ್ತು ಟಾಟಾ ಸಂಸ್ಥೆ ಗುರುತಿಸಿರುವುದು ಶ್ಲಾನೀಯ ಕಾರ್ಯ ಎಂದು ಮಂಗಳೂರು ಸ್ವಸ್ತಿಕಾ ಬಿಸ್‌ನೆಸ್ ಸ್ಕೂಲ್ ಅಧ್ಯಕ್ಷ ಡಾ.ರಾವೇಂದ್ರ ಹೊಳ್ಳ ಶ್ಲಾಸಿದರು.
ಬಿ.ಸಿ.ರೋಡಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐಎ್ಎ) ಸಂಸ್ಥೆಯ ಆರ್ಕೈವ್ ಮತ್ತು ಮ್ಯೂಸಿಯಂಸ್ ಕಾರ್ಯಕ್ರಮದ ಅಡಿಯಲ್ಲಿ ಟಾಟಾ ಟ್ರಸ್ಟ್ ಸಹಯೋಗದೊಂದಿಗೆ ಆರಂಭಗೊಂಡ ‘ಹಸಿರು ಹೊದಿಕೆಯಡಿ ತುಳು ಜೀವನದ ಸಾಂಸ್ಕೃತಿಕ ಪರಂಪರೆ’ಎಂಬ ವಿಶೇಷ ವಸ್ತುಪ್ರದರ್ಶನ ಉದ್ಘಾಟಿಸಿ ವಾತನಾಡಿದರು.
ಐಎಫ್‌ಎ ಕಾರ್ಯಕ್ರಮ ಸಂಯೋಜಕಿ ರುತ್ವಿಕಾ ಮಿಶ್ರಾ, ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಂ ಪೂಜಾರಿ, ಕ್ಯುರೇಟರ್‌ಗಳಾದ ಮಧುಶ್ರೀ ಹಾಗೂ ಬ್ರಿಯನ್ ಡಿಸೋಜ ಮಾತನಾಡಿದರು. ಶ್ರಿಯದಿತ್ ಪ್ರಾರ್ಥಿಸಿದರು. ಸಿಂಧೂರಾ ಟಿ.ಪಿ. ಸ್ವಾಗತಿಸಿ ವಂದಿಸಿದರು. ಡಾ.ಆಶಾಲತಾ ಸುವರ್ಣ ಸಹಕರಿಸಿದರು.
ತುಳುನಾಡಿನ ಪ್ರತಿ ವಸ್ತು ಇತಿಹಾಸವನ್ನು ತಿಳಿಸುತ್ತದೆ. ತೆಂಗಿನ ಗೆರಟೆಯಿಂದ ವಾಡುವ ಇತಿಹಾಸದ ಪಾಠ ಪ್ರದರ್ಶನದ ಪ್ರಮುಖ ಆಕರ್ಷಣೆಯವಾಗಿರುವುದು ವಿಶೇಷ. ಡಾ.ತುಕಾರಾಂ ಪೂಜಾರಿ ಅವರ ಅವಿರತ ಶ್ರಮದ ಮುಖೇನ ಕಟ್ಟಿದ ಈ ವಸ್ತುಸಂಗ್ರಹಾಲಯ ಮುಂದಿನ ದಿನಗಳಲ್ಲಿ ದೇಶ ವಿದೇಶಿಗರ ಆಕರ್ಷಣೆಯ ಕೇಂದ್ರವಾಗಲಿದೆ.