ನಿಯಮಾನುಸಾರ ನೀಡಿ ವಾಸ್ತವ್ಯ ದೃಢೀಕರಣ ಪತ್ರ

ಉಡುಪಿ ಜಿಲ್ಲೆಯ ನೈಜ ಮತದಾರರಿಗೆ ಎಸ್​ಐಆರ್​ ಪ್ರಕ್ರಿಯೆಗೆ ವಾಸ್ತವ್ಯ ದೃಢೀಕರಣ ಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪಾ ಅವರಿಗೆ ರಮೇಶ್​ ಕಾಂಚನ್​ ಮನವಿ ಸಲ್ಲಿಸಿದರು. ಮಹಾಬಲ ಕುಂದರ್​, ಕೃಷ್ಣ ಹೆಬ್ಬಾರ್​, ಹರಿಪ್ರಸಾದ್​ ರೈ, ಗಣೇಶ್​ ನೆರ್ಗಿ, ಸತೀಶ್​ ಕೊಡವೂರು, ಮಮತಾ ಶೆಟ್ಟಿ, ಆಶಾ ಚಂದ್ರಶೇಖರ್​ ಇತರರಿದ್ದರು.
ಉಡುಪಿ ಜಿಲ್ಲೆಯ ನೈಜ ಮತದಾರರಿಗೆ ಎಸ್​ಐಆರ್​ ಪ್ರಕ್ರಿಯೆಗೆ ವಾಸ್ತವ್ಯ ದೃಢೀಕರಣ ಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪಾ ಅವರಿಗೆ ರಮೇಶ್​ ಕಾಂಚನ್​ ಮನವಿ ಸಲ್ಲಿಸಿದರು. ಮಹಾಬಲ ಕುಂದರ್​, ಕೃಷ್ಣ ಹೆಬ್ಬಾರ್​, ಹರಿಪ್ರಸಾದ್​ ರೈ, ಗಣೇಶ್​ ನೆರ್ಗಿ, ಸತೀಶ್​ ಕೊಡವೂರು, ಮಮತಾ ಶೆಟ್ಟಿ, ಆಶಾ ಚಂದ್ರಶೇಖರ್​ ಇತರರಿದ್ದರು.
Published on

* ಉಡುಪಿ ಬ್ಲಾಕ್​ ಕಾಂಗ್ರೆಸ್ ಅಧ್ಯಕ್​ ರಮೇಶ್​ ಕಾಂಚನ್​ ಆಗ್ರಹ

* ಎಸ್​ಐಆರ್​ ಸಮಸ್ಯೆ ನೀಗಿಸಲು ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​)ಯ ಪ್ರಕ್ರಿಯೆಗೆ ಸಂಬಂಧಿಸಿ ಜಿಲ್ಲೆಯ ನೈಜ ಮತದಾರರಿಗೂ ಸಹ ವಾಸ್ತವ್ಯ ದೃಢೀಕರಣ ಪತ್ರ ಪಡೆಯುವಲ್ಲಿ ತೀವ್ರ ಸಮಸ್ಯೆ ಆಗುತ್ತಿದೆ. ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಮತದಾರರಿಗೆ ಆಗುತ್ತಿರುವ ತೊಂದರೆ ಪರಿಹರಿಸಬೇಕು ಎಂದು ಉಡುಪಿ ಬ್ಲಾಕ್​ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷ ರಮೇಶ್​ ಕಾಂಚನ್​ ಆಗ್ರಹಿಸಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ (ಸೆ.11) ನಿಯೋಗದೊಂದಿಗೆ ತೆರಳಿ ಡಿಸಿ ಸ್ವರೂಪಾ ಟಿ.ಕೆ. ಅವರಿಗೆ ಆಗುತ್ತಿರುವ ಸಮಸ್ಯೆ ವಿವರಿಸಿ, ಸೂಕ್ರ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿ ಮಾತನಾಡಿದರು.
ಮತದಾರರಿಗೆ ನೋಟಿಸ್​
ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಎಸ್​ಐಆರ್​ ಪ್ರಕ್ರಿಯೆಯಲ್ಲಿ ಮತದಾರರ ವಿವರಗಳಲ್ಲಿನ ವ್ಯತ್ಯಾಸ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಮತದಾರರಿಗೆ ನೋಟಿಸ್​ ಬರುತ್ತಿದೆ. ನೋಟಿಸ್​ನಲ್ಲಿ ಸೂಚಿಸಿದ ದಾಖಲೆಗಳು ಅವರಲ್ಲಿ ಇಲ್ಲದಿದ್ದಾಗ ಚುನಾವಣಾ ಆಯೋಗವು ಮಾನ್ಯ ಮಾಡುವ ವಾಸ್ತವ್ಯ ದೃಢೀಕರಣ ಪತ್ರಕ್ಕಾಗಿ ಸ್ಥಳೀಯ ಕಂದಾಯ ಕಚೇರಿ ಅಲೆಯುವಂತಾಗಿದೆ. ಅಧಿಕಾರಿಗಳು ವಿವಿಧ ಕಾರಣ ನೀಡಿ ಸತಾಯಿಸುತ್ತಿದ್ದಾರೆ ಎಂದು ದೂರಿದರು.

ಬಾಡಿಗೆದಾರರಿಗೆ ದಾಖಲೆ ಕೊರತೆ

ಒಂದೇ ಸ್ಥಳದಲ್ಲಿ ಹಲವು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸಿಸುವವರ ಬಳಿ ಸೂಕ್ತ ದಾಖಲೆ ಇಲ್ಲ. ಇರುವ ಹಳೆಯ ದಾಖಲೆಗಳಲ್ಲಿ ವಿಳಾಸದ ವ್ಯತ್ಯಾಸ ಇರುವುದರಿಂದ ದೃಢೀಕರಣ ಪತ್ರ ನೀಡುತ್ತಿಲ್ಲ. ಇದು ನೈಜ ಮತದಾರರಿಗೂ ಬೇಸರ ತರುತ್ತಿದೆ. ಮತದಾನವು ಸಾಂವಿಧಾನಿಕ ಹಕ್ಕಾಗಿದೆ. ಅದರಿಂದ ಯಾರೂ ವಂಚಿತರಾಗಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗದಂತೆ ಹಾಗೂ ಎಸ್​ಐಆರ್​ಗೆ ಸಂಬಂಧಿಸಿ ಅರ್ಜಿ ಸಲ್ಲಿಸಿದ ಅರ್ಹ ನಾಗರಿಕರಿಗೆ ವಾಸ್ತವ್ಯ ದೃಢೀಕರಣ ಪತ್ರ ಕೊಡುವಂತೆ ಸೂಕ್ತ ನಿರ್ದೇಶನ ನೀಡಿ ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.
ಕಾಂಗ್ರೆಸ್​ ನಾಯಕರಾದ ಮಹಾಬಲ ಕುಂದರ್​, ಕೃಷ್ಣ ಹೆಬ್ಬಾರ್​, ಹರಿಪ್ರಸಾದ್​ ರೈ, ಗಣೇಶ್​ ನೆರ್ಗಿ, ಸತೀಶ್​ ಕೊಡವೂರು, ಸುಖೇಶ್​ ಕುಂದರ್​, ಸತೀಶ ಕುಮಾರ್​ ಮಂಚಿ, ಶಶಿರಾಜ್​ ಕುಂದರ್​, ಲಕ್ಷ್ಮಣ್ ಪೂಜಾರಿ, ಮಮತಾ ಶೆಟ್ಟಿ, ಆಶಾ ಚಂದ್ರಶೇಖರ್​, ಸಂಧ್ಯಾ ತಿಲಕ್​ರಾಜ್​, ಸದಾನಂದ್​ ಕುಲಾಲ್​, ಆರೀಫ್​, ಬೋನಿಫಾಸ್​, ಭರತಕುಮಾರ್​, ಶಕುಂತಲಾ, ದಯಾನಂದ್​, ಸಂಜಯ್​ ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net