ಸಂಪೂರ್ಣ ರಸ್ತೆಗೆ ಮಾಡಿ ಡಾಂಬರೀಕರಣ

ಉಡುಪಿ ಪೌರಾಯುಕ್ತ ಮಹಾಂತೇಶ ಹಂಗರಗಿ ಅವರಿಗೆ ರಮೇಶ ಕಾಂಚನ್​ ಮನವಿ ಸಲ್ಲಿಸಿದರು. ವಿಜಯ ಪೂಜಾರಿ, ನಾಮನಿರ್ದೇಶಿತ ಸದಸ್ಯ ಮೊಹಮ್ಮದ್​, ಗಣೇಶ ನೆರ್ಗಿ, ಚಂದ್ರಮೋಹನ ಚಿಟ್ಪಾಡಿ, ಸತೀಶಕುಮಾರ್​ ಮಂಚಿ, ಪ್ರೀತಿ ಸಾಲಿನ್ಸ್​ ಇತರರಿದ್ದರು.
ಉಡುಪಿ ಪೌರಾಯುಕ್ತ ಮಹಾಂತೇಶ ಹಂಗರಗಿ ಅವರಿಗೆ ರಮೇಶ ಕಾಂಚನ್​ ಮನವಿ ಸಲ್ಲಿಸಿದರು. ವಿಜಯ ಪೂಜಾರಿ, ನಾಮನಿರ್ದೇಶಿತ ಸದಸ್ಯ ಮೊಹಮ್ಮದ್​, ಗಣೇಶ ನೆರ್ಗಿ, ಚಂದ್ರಮೋಹನ ಚಿಟ್ಪಾಡಿ, ಸತೀಶಕುಮಾರ್​ ಮಂಚಿ, ಪ್ರೀತಿ ಸಾಲಿನ್ಸ್​ ಇತರರಿದ್ದರು.
Published on: 

* ಉಡುಪಿ ನಗರಸಭೆಗೆ ರಮೇಶ ಕಾಂಚನ್​ ಮನವಿ

ಉಡುಪಿ: ಬೈಲೂರು 31ನೇ ವಾರ್ಡ್​ನ ಶ್ರೀನಿವಾಸ ದೇವಸ್ಥಾನದ ಮುಖ್ಯರಸ್ತೆಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವರೆಗೆ ಇರುವ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣ ಮಾಡಬೇಕು. ಪಿಪಿಸಿ ಕಾಲೇಜ್​ನತ್ತ ಸಾಗುವ ಮುಖ್ಯ ರಸ್ತೆ ಮಾರ್ಗದ ಒಳಚರಂಡಿ ಪೈಪ್​ಲೈನ್​ ಸಣ್ಣ ಗಾತ್ರದಲ್ಲಿದ್ದು, 13 ವರ್ಷದಿಂದ ಕೊಳಚೆ ನೀರು ಮುಖ್ಯ ರಸ್ತೆಯಲ್ಲಿ ಹರಿಯುತ್ತಿದೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾರ್ಡ್​ನ ಮಾಜಿ ಸದಸ್ಯ ಹಾಗೂ ಬ್ಲಾಕ್​ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ರಮೇಶ ಕಾಂಚನ್​ ಆಗ್ರಹಿಸಿದರು.

ಉಡುಪಿಯ ನಗರಸಭೆಗೆ ಮಂಗಳವಾರ (ನ.3) ನಿಯೋಗದೊಂದಿಗೆ ತೆರಳಿ ಪೌರಾಯುಕ್ತ ಮಹಾಂತೇಶ ಹಂಗರಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ವಾರ್ಡ್​ನ ನಾಗರಿಕರಿಗೆ ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮಳೆಗಾಲ ಮುಗಿದಿದ್ದು, ಡಾಂಬರ್​ ಪ್ಲಾಂಟ್​ಗಳು ಮತ್ತೆ ಆರಂಭಗೊಂಡಿವೆ. ಹೀಗಾಗಿ ಇನ್ನೂ ವಿಳಂಬ ಮಾಡದೆ ರಸ್ತೆಗೆ ಸಂಪೂರ್ಣವಾಗಿ ಡಾಂಬರ್​ ಹಾಕಿಬೇಕು ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತ, ಈಗಾಗಲೇ ನಗರಸಭೆಯಿಂದ 97 ಲಕ್ಷ ರೂ. ವೆಚ್ಚದಲ್ಲಿ ಒಳಚರಂಡಿಗೆ ದೊಡ್ಡ ಗಾತ್ರದ ಪೈಪ್​ಲೈನ್​ ಅಳವಡಿಕೆಗೆ ಹಾಗೂ ರಸ್ತೆಗೆ ಸಂಪೂರ್ಣ ಫೆವರ್​ ಫಿನಿಷ್​ ಮಾದರಿಯಲ್ಲಿ ಡಾಂರೀಕರಣ ಮಾಡಲಾಗುವುದು. ಒಳಚರಂಡಿ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಪಿಪಿಸಿ ಕಾಲೇಜ್​ನತ್ತ ಸಾಗುವ ರಸ್ತೆ ಮಾರ್ಗದ ಒಳಚರಂಡಿ ಕಾಮಗಾರಿ ಸ್ಥಳದಲ್ಲಿ ಬಂಡೆ ಸಿಕ್ಕಿದ್ದರಿಂದ ಕಾಮಗಾರಿಗೆ ತೊಡಕಾಗಿದೆ. ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದರು.

ನಗರಸಭಾ ಮಾಜಿ ಸದಸ್ಯರಾದ ವಿಜಯ ಪೂಜಾರಿ, ನಾಮನಿರ್ದೇಶಿತ ಸದಸ್ಯ ಮೊಹಮ್ಮದ್​, ಪ್ರಮುಖರಾದ ಗಣೇಶ ನೆರ್ಗಿ, ಚಂದ್ರಮೋಹನ ಚಿಟ್ಪಾಡಿ, ಸತೀಶಕುಮಾರ್​ ಮಂಚಿ, ಸತೀಶ ಕೊಡವೂರು, ಮೊಹಮ್ಮದ್​ ಎಸ್​., ಸ್ಥಳೀಯರಾದ ಮ್ಯಾಕ್ಸಿಮ್​ ಡಿಸೋಜಾ, ಅನಂತಕೃಷ್ಣ ಪ್ರಭು, ಕೃಷ್ಣಾನಂದ ಪೈ, ಪ್ರೀತಿ ಸಾಲಿನ್ಸ್​, ಶಹನವಾಜ್​, ಕ್ರಿಸ್ಟಿನಾ ಬಂಗೇರ, ಗೀತಾ ರವಿ, ಶೋಭಾ ಭಂಡಾರಿ, ಯಶಸ್ವಿನಿ, ಸಂಜಯ ಆಚಾರ್ಯ, ಪ್ರಜ್ವಲ ಹಾಗೂ ಇತರರಿದ್ದರು.