

ರಾಮಾಶ್ರಯ ರಸ್ತೆ ಎಂದು ಹೆಸರು ಇಡುವ ಸಂದರ್ಭ ಯಾವುದೇ ಧರ್ಮೀಯರು ವಿರೋಧಿಸಿಲ್ಲ, ರಾಮನ ಆಶ್ರಯದಲ್ಲಿ ಇರುವಾಗ ಎಲ್ಲರೂ ಸಮಾನರು. ಆದರೆ ಇಲ್ಲಿನ ರಸ್ತೆ ವಿಚಾರದಲ್ಲಿ ಪ.ಪಂ. ಅಧ್ಯಕ್ಷೆ ರಾಜಕೀಯ ಮಾಡಿದ ಹಿನ್ನೆಲೆಯಲ್ಲಿ ಪಂಚಾಯಿತಿ ಒಳಗೂ, ಹೊರಗೂ ಹೋರಾಟ ನಡೆಸಲಾಗಿದೆ. ಸತ್ಯ ವಿಚಾರ ಸ್ಥಳೀಯರಿಗೆ ಗೊತ್ತಿದ್ದರೂ ಹೊರಭಾಗದಲ್ಲಿ ಬೇರೆಯದೇ ರೀತಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು ದುರಂತ.
ಕ್ಷೇತ್ರದಲ್ಲಿ ಪ್ರತಿ ಮನೆಗೆ ನೀರು, ವಿದ್ಯುತ್, ರಸ್ತೆ ಸಹಿತ ಮೂಲ ಸೌಕರ್ಯ ಒದಗಿಸಿಕೊಟ್ಟು ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ. ಯಾವುದೇ ವಿಚಾರದಲ್ಲಿ ಜಾತಿ, ಭೇದ ಮಾಡಿಲ್ಲ. ಅಂತಹವರ ವಿರುದ್ಧ ಆರೋಪ ಮಾಡುವುದು ಅವರ ದೌರ್ಬಲ್ಯವಲ್ಲದೆ ಇನ್ನೇನು ಅಲ್ಲ.
ಸಣ್ಣ ರಸ್ತೆ ಉದ್ಘಾಟಿಸಲು ಜಿಲ್ಲಾಮಟ್ಟದ ಪಕ್ಷದ ನಾಯಕರು, ಒಂದೇ ಧರ್ಮದ ಜನರನ್ನು ಸೇರಿಸಿ ರಾಜಕೀಯ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರನ್ನು ಹೀಯಾಳಿಕೆ ಮಾಡಲಾಗಿದೆ. ಈ ರಾಜಕೀಯದಲ್ಲಿ ರಾಮಾಶ್ತಯ ನಿವಾಸಿಗರಿಗೆ ಲಾಭವೇ ಆಗಿದ್ದು, ರಸ್ತೆ ಸಾಮಾಜಿಕವಾಗಿ ಉದ್ಘಾಟಿಸಲಾಗಿದೆ.