ಮಾರ್ಚ್ 25 ರಂದು ಶ್ರೀ ಪೇಜಾವರ ಮಠಾಧೀಶರಾದ ಶ್ರೀಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಪಟ್ಟದ ದೇವರ ಪೂಜೆ, 26ರಂದು ಸಂಜೆ ಕಟ್ಟೆ ಪೂಜೆ, 27ರಂದು ಬೆಳಿಗ್ಗೆ 7 ರಿಂದ ಪಂಚಾಮೃತ ಸಹಿತ ವಿಶೇಷ ಪೂಜೆ, ಪವಮಾನ ಕಲಶಾಭಿಶೇಕ, ಶ್ರೀಮುಖ್ಯಪ್ರಾಣ ದೇವರ ಪೂಜೆ, ಪಲ್ಲ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ರಿಂದ ರಾಯಚೂರು ಶೇಷಗಿರಿದಾಸರು ಮತ್ತು ಬಳಗದಿಂದ ದಾಸವಾಣಿ ಕಾರ್ಯಕ್ರಮ ಜರಗಲಿದೆ. ಇದೇ ಸಂದರ್ಭದಲ್ಲಿ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರಿಂದ ಸಂಸ್ಥಾನ ಪೂಜೆ ನಡೆಯಲಿದೆ. ರಾತ್ರಿ 8ಕ್ಕೆ ಗೆಜ್ಜೆಗಿರಿ ಮೇಳದಿಂದ ಶ್ರೀಕೃಷ್ಣ ಲೀಲಾಮೃತ ಯಕ್ಷಗಾನ ಬಯಲಾಟ, ಸಾಯಂಕಾಲ 4.30ಕ್ಕೆ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಆಗಮನ ಮತ್ತು ಪ್ರಾಣದೇವರಿಗೆ ರಂಗಪೂಜೆ, 7ಘಂಟೆಗೆ ಮಹಾರಥೋತ್ಸವ ಹಾಗೂ ಓಲಗಮಂಟಪ ಪೂಜೆ ನಡೆಯಲಿದೆ. 28ರಂದು ಬೆಳಿಗ್ಗೆ 9ಕ್ಕೆ ಹಗಲು ರಥೋತ್ಸವ ಮತ್ತು ಸುವರ್ಣ ನದಿಯಲ್ಲಿ ಅವಭೃತ ಸ್ನಾನ ಹಾಗೂ ಶ್ರೀಕೃಷ್ಣಾಪುರ ಮಠಾಧೀಶರ ಸಂಸ್ಥಾನ ಪೂಜೆ ನಡೆಯಲಿದೆ. ಸಂಜೆ ಮಠದ ದೈವವಾದ ಬೊಬ್ಬರ್ಯ ದೈವದ ಕೋಲ ನಡೆಯಲಿದೆ ಎಂದು ಮಹಿತಿ ನೀಡಿದರು.