ರಬ್ಬರ್ ಸೊಸೈಟಿ ಏಳಿಗೆಯಲ್ಲಿ ರಾಜು ಶೆಟ್ಟಿ ಪಾತ್ರ ಮಹತ್ತರ

 ಉಜಿರೆ ರಬ್ಬರ್ ಸೊಸೈಟಿ ಸಿಇಒ ಆಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ರಾಜು ಶೆಟ್ಟಿ ಹಾಗೂ ಮನೆಯವರನ್ನು ಅಭಿನಂದಿಸಲಾಯಿತು. ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ,  ಶ್ರೀಧರ ಜಿ.ಭಿಡೆ, ಗಂಗಾಧರ ಗೌಡ, ಡಾ.ವಿಘ್ನೇಶ್ವರ ವರ್ಮುಡಿ ಇತರರು ಇದ್ದರು.
ಉಜಿರೆ ರಬ್ಬರ್ ಸೊಸೈಟಿ ಸಿಇಒ ಆಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ರಾಜು ಶೆಟ್ಟಿ ಹಾಗೂ ಮನೆಯವರನ್ನು ಅಭಿನಂದಿಸಲಾಯಿತು. ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಶ್ರೀಧರ ಜಿ.ಭಿಡೆ, ಗಂಗಾಧರ ಗೌಡ, ಡಾ.ವಿಘ್ನೇಶ್ವರ ವರ್ಮುಡಿ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ರಬ್ಬರ್ ಸೊಸೈಟಿಯ ಸಾಧನೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದು ಇದರಲ್ಲಿ ರಾಜು ಶೆಟ್ಟಿ ಅವರ ಪ್ರಾತ್ರ ಪ್ರಮುಖವಾದುದು. ಖರೀದಿ ಸುಲಭ, ಮಾರಾಟ ಕಷ್ಟ ಎನ್ನುವ ಇತ್ತೀಚಿನ ವರ್ಷಗಳ ಪರಿಸ್ಥಿತಿಯಲ್ಲಿ ಅವರು ನಿಷ್ಠೆಯ ಸೇವೆ ಸಲ್ಲಿಸಿದ್ದಾರೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.
ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಮಂಗಳವಾರ ಉಜಿರೆಯ ರಬ್ಬರ್ ಸೊಸೈಟಿ ಸಿಇಒ ಆಗಿ ವಯೋನಿವೃತ್ತಿ ಹೊಂದಿದ ರಾಜು ಶೆಟ್ಟಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಈಗಿನ ವ್ಯವಸ್ಥೆಗಳ ವಿರುದ್ಧ ಈಜಿ ಕೆಲಸ ಮಾಡುವುದು ದೊಡ್ಡ ಸಾಹಸ. ಅಸಾಮಾನ್ಯ ಕೆಲಸಕ್ಕೆ ನೀಡುವ ಗೌರವ ಇತರರಿಗೆ ಪ್ರೇರಣೆಯಾಗುತ್ತದೆ. ದೇಶದ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರ ಮಹತ್ವದ ಪಾತ್ರ ವಹಿಸಿದೆ. ಭಾರತದ ಹೆಚ್ಚಿನ ಎಲ್ಲ ಕೃಷಿ ಉತ್ಪನ್ನಗಳಿಗೆ ಜಗತ್ತು ತೆರೆದುಕೊಂಡಿದೆ. ಆದರೆ ಉತ್ಪನ್ನಗಳ ಬ್ರಾೃಂಡಿಂಗ್, ಪ್ಯಾಕಿಂಗ್ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವುದು ಅತಿ ಮುಖ್ಯ ಎಂದು ಹೇಳಿದರು.
ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ ಉತ್ತಮ ವ್ಯವಹಾರ ಚತುರ ರಾಜು ಶೆಟ್ಟಿ ರಬ್ಬರ್ ಸೊಸೈಟಿಯನ್ನು ಬೆಳೆಸಲು ನಿರಂತರ ಶ್ರಮ ವಹಿಸಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಾಜು ಶೆಟಿ, ಸೊಸೈಟಿಯ ಆಡಳಿತ ಮಂಡಳಿ, ಹಿರಿಯರು, ಸಿಬ್ಬಂದಿ, ಸದಸ್ಯರು ನೀಡಿದ ಪ್ರೋತ್ಸಾಹಕ್ಕೆ ಸದಾ ಕೃತಜ್ಞನಾಗಿರುತ್ತೇನೆ ಎಂದರು.
ಹಿರಿಯ ಅರ್ಥಶಾಸ್ತ್ರಜ್ಞ ಡಾ.ವಿಘ್ನೇಶ್ವರ ವರ್ಮುಡಿ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಸಂಘದ ಸಿಬ್ಬಂದಿ ಪ್ರಕಾಶ್ ಗೌಡ, ಬಂಗಾಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಮಾನತಾಡಿದರು.
ಸಂಘ-ಸಂಸ್ಥೆಗಳ ವತಿಯಿಂದ ಹಾಗೂ ವೈಯಕ್ತಿಕವಾಗಿ ರಾಜು ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಉಪಾಧ್ಯಕ್ಷ ಅನಂತಭಟ್ ಮಚ್ಚಿಮಲೆ ಸ್ವಾಗತಿಸಿದರು. ನಿಯೋಜಿತ ಸಿಇಒ ಹರಿಪ್ರಸಾದ್ ವಂದಿಸಿದರು. ಪತ್ರಕರ್ತ ಆಶ್ರಫ್ ಆಲಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿ ಪದ್ಮಾವತಿ ಜೆ.ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು.
ನಿರ್ದೇಶಕರಾದ ಜಯಶ್ರೀ ಡಿ.ಎಂ., ಆರ್.ಸುಭಾಷಿಣಿ, ಬೈರಪ್ಪ, ಕೆ.ರಾಮ ನಾಯ್ಕ, ಬಾಲಕೃಷ್ಣ ಗೌಡ ಕೆ,. ಸೋಮನಾಥ ಬಂಗೇರ, ಗ್ರೇಸಿಯನ್ ವೇಗಸ್, ಎಚ್.ಪದ್ಮಾ ಗೌಡ, ಕೆ.ಜೆ.ಆಗಸ್ಟಿನ್, ತಿಮ್ಮಪ್ಪ ಗೌಡ ಪಿ., ಭರತ್ ಕುಮಾರ್ ಎಚ್., ಶಾಜಿ ಪಿ.ಎ., ಶಶಿಧರ ಡೋಂಗ್ರೆ, ವಿಶೇಷ ಆಹ್ವಾನಿತರಾದ ಅಬ್ರಾಹಾಂ ಬಿ.ಎಸ್., ಹರೀಶ್ ರಾವ್ ಉಪಸ್ಥಿತರಿದ್ದರು.

33 ವರ್ಷಗಳಿಂದ ಸಿಇಒ ಆಗಿ ಪ್ರತಿಯೊಂದು ಹಂತದಲ್ಲೂ ಸಂಘದ ಅಭಿವೃದ್ಧಿಯಲ್ಲಿ ರಾಜು ಶೆಟ್ಟಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರ ಸೇವಾವಧಿಯಲ್ಲಿ ಪ್ರತಿ ವರ್ಷವೂ ಸಂಘ ಲಾಭವನ್ನು ಗಳಿಸಿರುವುದು ಹೆಮ್ಮೆಯ ವಿಚಾರ. ಮುಂದಿನ ಎರಡು ವರ್ಷ ಅವಧಿಗೆ ಸಂಘದ ವಿಶೇಷ ಅಧಿಕಾರಿಯಾಗಿ ಸೇವೆ ನೀಡಲಿದ್ದಾರೆ.

— ಶ್ರೀಧರ ಜಿ.ಭಿಡೆ, ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net