ಮಕ್ಕಳನ್ನು ಪರಿಸರಸ್ನೇಹಿಯಾಗಿ ಬೆಳೆಸಿ

 ಕೋಟ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದಲ್ಲಿ ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಭಟ್ ಶಾಲಾ ವಲ್ಲರಿ ಹಸ್ತಪ್ರತಿಯನ್ನು  ಬಿಡುಗಡೆಗೊಳಿಸಿದರು. ಸತೀಶ್ ಕುಂದರ್ ಬಾರಿಕೆರೆ, ರಂಗಯ್ಯ ಅಡಿಗ, ಭಾರತಿ ಪೂಜಾರಿ, ಉದಯ್ ಗಾಣಿಗ ಮತ್ತಿತರರು ಇದ್ದರು.
ಕೋಟ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದಲ್ಲಿ ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಭಟ್ ಶಾಲಾ ವಲ್ಲರಿ ಹಸ್ತಪ್ರತಿಯನ್ನು ಬಿಡುಗಡೆಗೊಳಿಸಿದರು. ಸತೀಶ್ ಕುಂದರ್ ಬಾರಿಕೆರೆ, ರಂಗಯ್ಯ ಅಡಿಗ, ಭಾರತಿ ಪೂಜಾರಿ, ಉದಯ್ ಗಾಣಿಗ ಮತ್ತಿತರರು ಇದ್ದರು.
Published on
ಕೋಟ: ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವುದರ ಜತೆಗೆ ಆರೋಗ್ಯವಂತ ಹಾಗೂ ಪರಿಸರಸ್ನೇಹಿಯಾಗಿ ಬೆಳೆಸಿ ಎಂದು ಕೋಟ ಶಾಲೆ ಹಳೇ ವಿದ್ಯಾರ್ಥಿ ಸುಜಾತಾ ಬಾಯರಿ ಹೇಳಿದರು.
ಕೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದ ವಲ್ಲರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಅಧ್ಯಕ್ಷತೆ ವಹಿಸಿದ್ದರು. ವರ್ಗಾವಣೆಗೊಂಡ ಹಿರಿಯ ಶಿಕ್ಷಕಿ ಪುಷ್ಪಲತಾ ಅವರನ್ನು ಗೌರವಿಸಲಾಯಿತು. ಶಾಲಾ ವಲ್ಲರಿ ಹಸ್ತಪ್ರತಿಯನ್ನು ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಭಟ್ ಬಿಡುಗಡೆಗೊಳಿಸಿದರು.
ಸ್ಥಳೀಯರಾದ ರಂಗಯ್ಯ ಅಡಿಗ, ಭಾರತಿ ಪೂಜಾರಿ, ಉದಯ್ ಗಾಣಿಗ, ವಿದ್ಯಾರ್ಥಿ ಮುಖಂಡರಾದ ನಿತೀಶ್, ಅನುಜ್ಞಾ ಉಪಸ್ಥಿತರಿದ್ದರು. ದತ್ತಿನಿಧಿ ಗೌರವ ಶಿಕ್ಷಕಿ ಮಾನಸ, ಗೌರವ ಶಿಕ್ಷಕಿಯರಾದ ಶಾರದಾ, ಸುಮಾ, ಶ್ರೀದೇವಿ ಬಹುಮಾನ ಪಟ್ಟಿ ವಾಚಿಸಿದರು. ಮುಖ್ಯಶಿಕ್ಷಕಿ ಪುಷ್ಪಾವತಿ ಹೊಳ್ಳ ವರದಿ ವಾಚಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ಮಹಾಲಕ್ಷ್ಮೀ ಸೋಮಯಾಜಿ ಸ್ವಾಗತಿಸಿದರು. ಹಿರಿಯ ಶಿಕ್ಷಕ ರೂಬಿ ಪಿಂಟೋ ನಿರೂಪಿಸಿದರು. ವಿನಯಾ ವಂದಿಸಿದರು. ಬಹುಮಾನ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net