ಕಾರ್ಕಳ ತಾಲೂಕಿನ ವಿವಿಧೆಡೆ ಮಳೆಯಿಂದ ಹಾನಿ

ಕಾರ್ಕಳದಲ್ಲಿ ಗಾಳಿ- ಮಳೆಗೆ ಹಾನಿ ಸಂಭವಿಸಿರುವುದು.
ಕಾರ್ಕಳದಲ್ಲಿ ಗಾಳಿ- ಮಳೆಗೆ ಹಾನಿ ಸಂಭವಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕಿನಾದ್ಯಂತ ಭಾರೀ ಗಾಳಿ-ಮಳೆ
  • ಮನೆಗೆ ಸಿಡಿಲು ಬಡಿದು ನಷ್ಟ
ಕಾರ್ಕಳ: ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಸುರಿದ ಭಾರಿ ಗಾಳಿ- ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ.
ಕಲ್ಯಾ ಗ್ರಾಮದ ಅಶೋಕ ನಗರದಲ್ಲಿ ಚಂದ್ರಶೇಖರ್​ ಆಚಾರ್ಯ ಎಂಬುವರ ಮನೆಗೆ ಸಂಜೆ 6ರ ವೇಳೆಗೆ ಸಿಡಿಲು ಬಡಿದು ನಷ್ಟ ಸಂಭವಿಸಿದೆ.
ಬಂಗ್ಲೆಗುಡ್ಡೆ ಸದ್ಭಾವನಗರ ನಿವಾಸಿ ಮಾಧವ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ‘
ಕಡ್ತಲ ಗ್ರಾಮದ ಆನಂದ ನಾಯಕ್​ ಅವರ ಅಡಿಕೆ ತೋಟದಲ್ಲಿ ಗಾಳಿ ಮಳೆಯಿಂದ ಹಲವು ಅಡಿಕೆ ಮರಗಳು ತುಂಡಾಗಿ ಬಿದ್ದಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net