ರೈಲು ನಿಲ್ದಾಣದ ತ್ಯಾಜ್ಯ ನೀರು ಸಮಸ್ಯೆಗೆ ಮುಕ್ತಿ

 ಶೌಚಗೃಹದ ತ್ಯಾಜ್ಯ ಪೈಪ್‌ಗಳನ್ನು ಬದಲಿಸುತ್ತಿರುವ ಕಾರ್ಮಿಕರು.
ಶೌಚಗೃಹದ ತ್ಯಾಜ್ಯ ಪೈಪ್‌ಗಳನ್ನು ಬದಲಿಸುತ್ತಿರುವ ಕಾರ್ಮಿಕರು.
Published on
ಮೂಲ್ಕಿ: ಮೂಲ್ಕಿ ರೈಲ್ವೆ ನಿಲ್ದಾಣದ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಹರಿಯುತ್ತಿದ್ದ ಶೌಚಗೃಹದ ತ್ಯಾಜ್ಯ ನೀರು ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ‘ವಿಜಯವಾಣಿ’ ವರದಿಗೆ ಎಚ್ಚೆತ್ತ ಅಧಿಕಾರಿಗಳು ತಕ್ಷಣವೇ ದುರಸ್ತಿ ಕಾರ್ಯ ಆರಂಭಿಸಿದ್ದು, ಸಾರ್ವಜನಿಕರು ನಿರಾಳರಾಗಿದ್ದಾರೆ.
ರೈಲು ನಿಲ್ದಾಣದ ಶೌಚಗೃಹದ ಹೊರಗಿನ ಟ್ಯಾಂಕ್ (ಪಿಟ್) ಭರ್ತಿಯಾಗಿ, ಮಲಿನ ನೀರು ವಾಹನ ಪಾರ್ಕಿಂಗ್ ಸ್ಥಳಕ್ಕೆ ಹರಿಯುತ್ತಿತ್ತು. ಮಳೆನೀರು ಇದರೊಂದಿಗೆ ಸೇರಿಕೊಂಡಿದ್ದರಿಂದ ಇಡೀ ಪ್ರದೇಶ ಸಂಪೂರ್ಣ ಕೆಸರುಮಯವಾಗಿತ್ತು. ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಈ ನಿಲ್ದಾಣವನ್ನು ಅವಲಂಬಿಸಿದ್ದು, ನಿಲ್ದಾಣಕ್ಕೆ ಪ್ರವೇಶಿಸುವಾಗಲೇ ಮಲಿನ ನೀರನ್ನು ತುಳಿದುಕೊಂಡು ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಿತ್ತು.
ಈ ಬಗ್ಗೆ ವಿಜಯವಾಣಿ ‘ಮೂಲ್ಕಿ ರೈಲ್ವೆ ನಿಲ್ದಾಣ ಶೌಚಗೃಹ ಅಧ್ವಾನ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಇದೀಗ ಎಚ್ಚೆತ್ತ ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಕಾರ್ಮಿಕರನ್ನು ಕಳುಹಿಸಿಕೊಟ್ಟಿದ್ದಾರೆ. ಶೌಚಗೃಹದ ಪಿಟ್ ಹಾಗೂ ಚೇಂಬರ್ ತೆರೆದು, ಬ್ಲಾಕ್ ಆಗಿದ್ದ ಪೈಪ್‌ಗಳನ್ನು ಬದಲಾಯಿಸುವ ಕಾಮಗಾರಿ ಆರಂಭಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net