ಆರ್ಪಿಎಫ್ ಅಧಿಕಾರಿಗಳು ಮಕ್ಕಳಿಗೆ ಉಪಾಹಾರ ನೀಡಿ, ಕೌನ್ಸೆಲಿಂಗ್ ನಡೆಸಿದಾಗ ಬಾಲಕರು ಕೌಟುಂಬಿಕ ಕಾರಣ ಹಾಗೂ ಸಣ್ಣಪುಟ್ಟ ಮುನಿಸಿನಿಂದಾಗಿ ಯಾರಿಗೂ ತಿಳಿಸದೆ ಮನೆಯಿಂದ ಓಡಿಬಂದಿರುವುದು ಬೆಳಕಿಗೆ ಬಂದಿದೆ. ಮಕ್ಕಳು ಅಪ್ರಾಪ್ತರಾಗಿದ್ದರಿಂದ ಮುಂದಿನ ಕಾನೂನು ಪ್ರಕ್ರಿಯೆ ಮಕ್ಕಳ ರಕ್ಷಣಾ ಟಕ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು.