ರೈಲ್ವೆ ಇಲಾಖೆಯ ತಾಂತ್ರಿಕ ಅಡಚಣೆ ನಿವಾರಣೆ

 ಶಿರೂರಿನ ಮುದ್ರಮಕ್ಕಿಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಕೃಷ್ಣ ಬಿಲ್ಲವ, ಕಾಪ್ಪಿ ನೂರ್‌ಮಹ್ಮದ್, ರಾಜೇಂದ್ರ ಶೆಟ್ಟಿ ಇತರರು ಇದ್ದರು.
ಶಿರೂರಿನ ಮುದ್ರಮಕ್ಕಿಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಕೃಷ್ಣ ಬಿಲ್ಲವ, ಕಾಪ್ಪಿ ನೂರ್‌ಮಹ್ಮದ್, ರಾಜೇಂದ್ರ ಶೆಟ್ಟಿ ಇತರರು ಇದ್ದರು.
Published on
ಬೈಂದೂರು: ಹತ್ತಾರು ಸಮಾಜಮುಖಿ ಕಾರ್ಯದ ಮೂಲಕ ಗುರುತಿಸಿಕೊಂಡ ಶಿರೂರಿನಲ್ಲಿ ದಾನಿಗಳ ನೆರವಿನಿಂದ 8 ಲಕ್ಷ ರೂ. ವೆಚ್ಚ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಲಾಯಿತು. ರೈಲ್ವೆ ಇಲಾಖೆಯ ತಾಂತ್ರಿಕ ಕಾರಣದಿಂದ ರಸ್ತೆಯಿಂದ ವಂಚಿತರಾಗಿದ್ದ ನಿವಾಸಿಗಳಿಗೆ ಶೀಘ್ರವೇ ರಸ್ತೆ ಸೌಲಭ್ಯ ಸಿಗಲಿದೆ.
ಶಿರೂರಿನ ಮುದ್ರಮಕ್ಕಿ ಮಹಾಸತಿ ದೇವಸ್ಥಾನ ಸೇರಿದಂತೆ 50ಕ್ಕೂ ಹೆಚ್ಚು ಮನೆಗಳಿರುವ ಈ ಭಾಗದಲ್ಲಿ ಸಮರ್ಪಕ ರಸ್ತೆಗಳಿರಲಿಲ್ಲ. ರೈಲ್ವೆ ಹಳಿಯ ಪಕ್ಕದಲ್ಲಿರುವ ಕಾರಣ ತಾಂತ್ರಿಕ ಸಮಸ್ಯೆ ಮತ್ತು ಸರ್ಕಾರದ ಅನುದಾನ ಕೂಡ ಬಳಸುವ ಅವಕಾಶ ಇರಲಿಲ್ಲ. ಈ ಬಗ್ಗೆ ಸ್ಥಳೀಯರು ಶಿರೂರು ಅಸೋಸಿಯೇಷನ್ ಹಾಗೂ ದಾನಿಗಳಿಗೆ ಮನವಿ ನೀಡಿದ್ದರು. ಕಾರ್ಯಪ್ರವೃತ್ತರಾದ ಶಿರೂರು ಅಸೋಸಿಯೇಷನ್ ಮುಂದಾಳತ್ವದಲ್ಲಿ ದಾನಿಗಳ ನೆರವಿನಿಂದ 8 ಲಕ್ಷ ರೂ .ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಈ ಮೂಲಕ ರಸ್ತೆಯು ಬಹುವರ್ಷದ ಬೇಡಿಕೆ ಈಡೇರಿರುವ ಜತೆಗೆ ಪರಸ್ಪರ ಸಾಮರಸ್ಯದ ಬೆಸೆದಿದೆ. ಪ್ರಸ್ತುತ ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅನುಮತಿ ನೀಡಿದ್ದಾರೆ. ಈ ಹಿಂದೆ ರಸ್ತೆ ನಿರ್ಮಾಣಕ್ಕೆ ದಾನಿಗಳು ಮುಂದಾದರೂ ರೈಲು ಮಾರ್ಗ ಇರುವ ಕಾರಣ ಅನುಮತಿ ದೊರೆತಿರಲಿಲ್ಲ. ಹೀಗಾಗಿ ಈ ಭಾಗದ ಗ್ರಾಪಂ ಸದಸ್ಯರು, ಅಸೋಸಿಯೇಷನ್ ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸ್ಥಳೀಯರು ನಡೆಸಿದ ನಿರಂತರ ಎರಡು ವರ್ಷದ ಪ್ರಯತ್ನದ ಫಲವಾಗಿ ರೈಲ್ವೆ ಇಲಾಖೆಯಿಂದ ನಿರಕ್ಷೇಪಣಾ ಪತ್ರ ಸಿಕ್ಕಿದೆ.
ಕೃಷ್ಣ ಬಿಲ್ಲವ ದುಬೈ, ಶಿರೂರು ಗ್ರಾಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್, ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಶೆಟ್ಟಿ, ಸದಸ್ಯ ಲಿಂಗಪ್ಪ ಮೇಸ್ತ, ಅರುಣ್ ಕುಮಾರ್ ಶಿರೂರು, ಎಚ್.ಎಸ್.ಸಿದ್ದಿಕ್, ರವೀಂದ್ರ ಶೆಟ್ಟಿ ಪಟೇಲ್, ಮಾಮ್ದು ಇಬ್ರಾಹಿಂ, ಇರ್ಫಾನ್, ಫಾರೂಕ್ ಮೊದಲಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net