ಆಸ್ಟ್ರೇಲಿಯಾಕ್ಕೆ ಭಾರತೀಯರ ಕೊಡುಗೆ ಅಪಾರ

ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಉಡುಪಿ ಪುತ್ತಿಗೆ ಮಠದಲ್ಲಿ ನಡೆದ ರಾವೇಂದ್ರ ಸ್ವಾಮಿಗಳ ಆರಾಧನೆಯಲ್ಲಿ ಸಂಸದ ವಾರೆನ್​ ಕಿರ್ಬಿ ಮಾತನಾಡಿದರು. ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ನೇತೃತ್ವದಲ್ಲಿ ರಾಯರ ವೃಂದಾವನಕ್ಕೆ ವಿಶೇಷ ಪೂಜೆ ನೆರವೇರಿತು.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಉಡುಪಿ ಪುತ್ತಿಗೆ ಮಠದಲ್ಲಿ ನಡೆದ ರಾವೇಂದ್ರ ಸ್ವಾಮಿಗಳ ಆರಾಧನೆಯಲ್ಲಿ ಸಂಸದ ವಾರೆನ್​ ಕಿರ್ಬಿ ಮಾತನಾಡಿದರು. ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ನೇತೃತ್ವದಲ್ಲಿ ರಾಯರ ವೃಂದಾವನಕ್ಕೆ ವಿಶೇಷ ಪೂಜೆ ನೆರವೇರಿತು.
Published on

*

 ಸಿಡ್ನಿ ಪುತ್ತಿಗೆ ಮಠದಲ್ಲಿ ರಾಯರ ಆರಾಧನೆ

* ರಿವರ್​ಸ್ಟೋನ್

 ಸಂಸದ ವಾರೆನ್​ ಕಿರ್ಬಿ ಮೆಚ್ಚುಗೆ

ಉಡುಪಿ: ಭಾರತೀಯರ ಧಾರ್ಮಿಕ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯ ಅತ್ಯಂತ ಶ್ರೀಮಂತ. ಅವುಗಳನ್ನು ಬಹುಸಾಂಸ್ಕೃತಿಕ ವೈವಿಧ್ಯತೆ ಹೊಂದಿರುವ ಆಸ್ಟ್ರೇಲಿಯಾದ ಸಮಾಜಕ್ಕೂ ನೀಡುತ್ತಿರುವುದು ದೊಡ್ಡ ಕೊಡುಗೆಯಾಗಿದೆ. ಸೌಹಾರ್ದ, ಸಹಬಾಳ್ವೆ ಹಾಗೂ ಭಾರತೀಯರ ಧಾರ್ಮಿಕ ಆಚರಣೆಯ ಚಟುವಟಿಕೆಗಳಿಗೆ ನಮ್ಮ ಸರ್ಕಾರದ ಸಹಕಾರ ಸದಾ ಇರಲಿದೆ ಎಂದು ರಿವರ್​ಸ್ಟೋನ್​ ಕ್ಷೇತ್ರದ ಲೇಬರ್​ ಪಕ್ಷದ ಸಂಸದ ವಾರೆನ್​ ಕಿರ್ಬಿ ತಿಳಿಸಿದರು.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಪುತ್ತಿಗೆ ಮಠದ ಶಾಖೆಯಲ್ಲಿ ಆಯೋಜಿಸಿದ್ದ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಗುರುರಾಯರ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಭಕ್ತರ ಪ್ರವಾಹ

ಪ್ರಧಾನ ಅರ್ಚಕ ನಿತಿಶ್​ ಆಚಾರ್ಯ ನೇತೃತ್ವದಲ್ಲಿ ಗುರುರಾಯರಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಅರ್ಚನೆ ಸೇರಿದಂತೆ ವಿಶೇಷ ಪೂಜೆ, ವಿವಿಧ ಧಾರ್ಮಿಕ ವಿಧಿವಿಧಾನ ನೆರವೇರಿತು. ನಾರಾಯಣ ಭಟ್​ ಸಹಕರಿಸಿದರು. ಮಂಜುನಾಥ ಭಟ್​ ನೇತೃತ್ವದಲ್ಲಿ ದೇವರಪ್ರಸಾದ ಸಿದ್ಧಪಡಿಸಲಾಗಿತ್ತು. ಭಕ್ತರು ರಾಘವೇಂದ್ರ ಸ್ತೋತ್ರ ಪಾರಾಯಣ, ಅಷ್ಟೋತ್ತರ ಪಾರಾಯಣ, ಭಜನೆ ನಡೆಸಿದರು. ಸಿಡ್ನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ಆರಾಧನೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಸಿಡ್ನಿಯ ಪುತ್ತಿಗೆ ಮಠದಲ್ಲಿ ನಡೆದ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಭಕ್ತಿ, ಸಂಸ್ಕೃತಿ, ಸೌಹಾರ್ದದ ಪ್ರತೀಕವಾಗಿ ಜರುಗಿತು. ಇದು ಭಾರತೀಯ ಪರಂಪರೆಯ ಸಮ್ಮಿಲನವಾಗಿ ಅತ್ಯಂತ ವೈಭವಪೂರ್ಣವಾಗಿ ಸಂಪನ್ನಗೊಂಡಿತು. ನವಿಮುಂಬೈಯಲ್ಲಿ ಚಾತುರ್ಮಾಸ್ಯ ನಿರತ ಸುಗುಣೇಂದ್ರ ಶ್ರೀಗಳ ಸಂದೇಶವನ್ನು ಸಿಡ್ನಿಯ ಭಕ್ತರಿಗೆ ತಿಳಿಸಲಾಯಿತು.

— ಪ್ರಸನ್ನ ಆಚಾರ್ಯ. ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net