ಸಂಗೀತ ಕಲೆಯಿಂದ ಆತ್ಮಸಾಕ್ಷಾತ್ಕಾರ

ಉಡುಪಿಯಲ್ಲಿ ಉದಯೋನ್ಮುಖ ಕಲಾವಿದೆ ಪ್ರಜ್ಞಾ ಅಡಿಗ ಅವರಿಗೆ 'ರಾಗ ಧನ ಪಲ್ಲವಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಗಣಪತಿ ಜೋಯಿಸ, ಶ್ರೀಕಿರಣ ಹೆಬ್ಬಾರ್​, ಉಮಾಶಂಕರಿ ಟಿ.ಕೆ., ಸರೋಜಾ ಆರ್​. ಆಚಾರ್ಯ, ವಾರಿಜಾಕ್ಷಿ ಭಟ್​ ಇದ್ದರು.
ಉಡುಪಿಯಲ್ಲಿ ಉದಯೋನ್ಮುಖ ಕಲಾವಿದೆ ಪ್ರಜ್ಞಾ ಅಡಿಗ ಅವರಿಗೆ 'ರಾಗ ಧನ ಪಲ್ಲವಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಗಣಪತಿ ಜೋಯಿಸ, ಶ್ರೀಕಿರಣ ಹೆಬ್ಬಾರ್​, ಉಮಾಶಂಕರಿ ಟಿ.ಕೆ., ಸರೋಜಾ ಆರ್​. ಆಚಾರ್ಯ, ವಾರಿಜಾಕ್ಷಿ ಭಟ್​ ಇದ್ದರು.
Published on

* ಡಾ. ಗಣಪತಿ ಜೋಯಿಸ ಪರ್ಕಳ ಅಭಿಪ್ರಾಯ

* ಪ್ರಜ್ಞಾ ಅಡಿಗರಿಗೆ 'ರಾಗ ಧನ ಪಲ್ಲವಿ' ಪ್ರಶಸ್ತಿ ಪ್ರದಾನ

ಉಡುಪಿ: ಸಂಗೀತ ಗೃಂಥದಲ್ಲಿ ದೇಸೀಯ ಹಾಗೂ ಮಾರ್ಗ ಎಂಬ ಎರಡು ವಿಭಾಗವಿದೆ. ಇಂದ್ರಿಯಗಳಿಗೆ ಸಂತಸ ನೀಡುವುದು ದೇಸೀಯವಾಗಿದೆ. ನಮ್ಮ ದೇಹದಲ್ಲಿ ಅನೇಕ ನಾಡಿಗಳಿದ್ದು ಅದರಲ್ಲಿ ಮನಸ್ಸು ಸಂಚಾರವಾಗುತ್ತದೆ. ಸುಶುಮ್ನಾ ಎಂಬ ನಾಡಿಯಲ್ಲಿ ಶಾಸ್ತ್ರೀಯ ನಾದೋಪಾಸನೆ ಸಂಚಾರದಿಂದ ಉನ್ನತ ಸ್ಥಿತಿಗೆ ಏರಿಸುವುದೇ ಮಾರ್ಗ ಸಂಗೀತವಾಗಿದೆ. ಭಾರತೀಯ ಕಲೆಗಳಲ್ಲಿ ಸಂಗೀತ ಶ್ರೇಷ್ಠ ಕಲೆಯಾಗಿದ್ದು ಆತ್ಮಸಾಕ್ಷಾತ್ಕಾರದ ಪ್ರತೀಕವಾಗಿದೆ. ಅಂತಹ ಸಂಗೀತದಿಂದ ವಂಚಿತರಾಗಬಾರದು ಎಂದು ಕೆಎಂಸಿ ಮಣಿಪಾಲದ ಯೋಗ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಗಣಪತಿ ಜೋಯಿಸ ಪರ್ಕಳ ಅಭಿಪ್ರಾಯಪಟ್ಟರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಗ ಧನ ಸಂಸ್ಥೆ ಉಡುಪಿ ಆಶ್ರಯದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿರುವ ಮೂರು ದಿನಗಳ 38ನೇ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವದ 2ನೇ ದಿನವಾದ ಶನಿವಾರ (ಫೆ.7) ಉದಯೋನ್ಮುಖ ಸಂಗೀತ ಕಲಾವಿದೆ ಪ್ರಜ್ಞಾ ಅಡಿಗ ಅವರಿಗೆ "ರಾಗ ಧನ ಪಲ್ಲವಿ' ಪ್ರಶಸ್ತಿ ವಿತರಿಸಿ ಮಾತನಾಡಿದರು.

ಹೆತ್ತವರ ಶ್ರಮಕ್ಕೆ ಕೋಟಿ ನಮನ

ಡಾ. ಸುಶೀಲಾ ಉಪಾಧ್ಯಾಯ ಸ್ಮರಣಾರ್ಥ ಡಾ. ಯು.ಪಿ. ಉಪಾಧ್ಯಾಯ ಪ್ರಾಯೋಜಿತ 'ರಾಗ ಧನ ಪಲ್ಲವಿ' ಪ್ರಶಸ್ತಿ ಸ್ವೀಕರಿಸಿದ ಪ್ರಜ್ಞಾ ಅಡಿಗ ಮಾತನಾಡಿ, ನನ್ನ ಚಿಕ್ಕ ಪಯಣದಲ್ಲಿ ತಂದೆ-ತಾಯಿಯ ಪಾತ್ರ ತುಂಬ ದೊಡ್ಡದು. ಮನೆಯಲ್ಲಿ ದಿನವಿಡೀ ಸಂಗೀತದ ವಾತಾವರಣವಿಟ್ಟು ನನಗೂ ನನ್ನ ತಮ್ಮನಿಗೂ ಸಂಗೀತದ ಸಂಸ್ಕಾರ  ನೀಡಿದ್ದಾರೆ. ನನ್ನ ತಂದೆ-ತಾಯಿಗೆ ಕೋಟ ನಮನ ಸಲ್ಲಿಸುತ್ತೇನೆ. ನನ್ನ ಗುರು ವಾರಿಜಾಕ್ಷಿ ಅವರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸುವುದು ಅತೀವ ಸಂತಸವಾಗಿದೆ. 8 ವರ್ಷದಿಂದ ವಿದುಷಿ ಡಾ. ಜಯಂತಿ ಕುಮರೇಶ್​ ಅವರಲ್ಲಿ ಸಂಗೀತ ಕಲಿಯುತಿದ್ದೇನೆ. 4 ವರ್ಷ ಅವರೊಂದಿಗೇ ಇದ್ದು ಗುರುಕುಲ ಮಾದರಿಯಲ್ಲಿ ಅವರು ನನಗೆ ಪ್ರೀತಿಯಿಂದ ಸಂಗೀತ ಜ್ಞಾನ ಧಾರೆ ಎರೆದಿದ್ದಾರೆ. ಅವರೆಲ್ಲರ ಆಶೀರ್ವಾದದಿಂದ ಸಂಗೀತ ಲೋಕದಲ್ಲಿ ನಾನೂ ಮಿನುಗುವಂತಾಗಿದೆ ಎಂದರು. 
ರಾಗ ಧನ ಸಂಸ್ಥೆಯ ಅಧ್ಯಕ್ಷ ಶ್ರೀಕಿರಣ ಹೆಬ್ಬಾರ್​ ಆರೂರು ಅಧ್ಯಕ್ಷತೆ ವಹಿಸಿದ್ದರು. ಆಯ್ಕೆ ಸಮಿತಿ ಸದಸ್ಯೆ ವಿದುಷಿ ಸರೋಜಾ ಆರ್​. ಆಚಾರ್ಯ, ಸಂಗೀತ ಗುರು ವಿದುಷಿ ವಾರಿಜಾಕ್ಷಿ ಭಟ್​ ಉಪಸ್ಥಿತರಿದ್ದರು.
ಹೇಮಲತಾ ರಾವ್​ ಹಾಗೂ ಸುರೇಖಾ ಭಟ್​ ಪ್ರಾರ್ಥಿಸಿದರು. ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಟಿ.ಕೆ. ಸ್ವಾಗತಿಸಿದರು. ಜ್ಯೋತಿ ಶೈಲೇಂದ್ರ ಅಭಿನಂದನಾ ಪತ್ರ ವಾಚಿಸಿದರು. ಸಂಸ್ಥೆಯ ಖಜಾಂಚಿ ಪ್ರೊ. ಕೆ.ಸದಾಶಿವ ರಾವ್​ ಸಹಕರಿಸಿದರು. ಕೆ.ಆರ್​. ರಾವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. 

ಸಂಗೀತ ಕಛೇರಿ

ಮಧ್ಯಾಹ್ನ 2 ಗಂಟೆಯಿಂದ ಪುರಂದರ ದಾಸರ ಪಿಳ್ಳರಿ ಗೀತೆಗಳು ಹಾಗೂ ಶ್ರಿ ತ್ಯಾಗರಾಜರ ನ ಪಂಚ ರತ್ನ ಗೋಷ್ಠಿ ಗಾಯನ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ವಿದುಷಿ ಪ್ರಜ್ಞಾ ಅಡಿಗ ಅವರಿಂದ 'ರಾಗಂ ತಾನಂ ಪಲ್ಲವಿ' ಸಂಗೀತ ಕಛೇರಿ ನಡೆಯಿತು. ವಯೋಲಿನ್​ನಲ್ಲಿ ವೈಭವ್​ ರಮಣಿ ಬೆಂಗಳೂರು, ಮೃದಂಗದಲ್ಲಿ ಪ್ರಜ್ವಲ್​ ಭಾರಧ್ವಾಜ್​ ಬೆಂಗಳೂರು ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net