_1786790905944.webp?w=480&auto=format%2Ccompress&fit=max)
_1786790905944.webp?w=480&auto=format%2Ccompress&fit=max)
ಕುಂಬಳೆ: ರಸ್ತೆ ಬದಿಯಲ್ಲಿ ಸಿಕ್ಕಿದ ಹಣ, ದಾಖಲೆಪತ್ರಗಳಿದ್ದ ಪರ್ಸನ್ನು ಶಾಲಾ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ತಲುಪಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನ ವಿದ್ಯಾರ್ಥಿಗಳಾದ ಶರ್ವಾಸ್, ಅಕ್ಷರ್, ಅಫೀಸ್, ಇರ್ಫಾನ್, ಮಿಥ್ಲಾಜ್ ಗುರುವಾರ ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಆರಿಕ್ಕಾಡಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಪರ್ಸ್ ಕಂಡಿದೆ. ಅದರಲ್ಲಿ ಹಣ, ಎಟಿಎಂ ಕಾರ್ಡ್, ಪಾನ್ ಕಾರ್ಡ್ ಸಹಿತ ದಾಖಲೆಪತ್ರಗಳಿದ್ದವು. ಕೂಡಲೇ ವಿದ್ಯಾರ್ಥಿಗಳು ಕುಂಬಳೆ ಪೊಲೀಸ್ ಠಾಣೆಗೆ ಹೋಗಿ ನೀಡಿದ್ದಾರೆ.
ಪೊಲೀಸರು ದಾಖಲೆಪತ್ರಗಳನ್ನು ಪರಿಶೀಲಿಸಿದಾಗ ಮೊಗ್ರಾಲ್ ಪುತ್ತೂರಿನ ನಫೀಸಾ ಅವರದ್ದೆಂದು ತಿಳಿದುಬಂದಿದೆ. ಬಳಿಕ ಪೊಲೀಸರು ಪರ್ಸ್‌ನ್ನು ನಫೀಸಾ ಅವರಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿಗಳ ಪ್ರಾಮಾಣಿಕತೆಯನ್ನು ಪೊಲೀಸರು, ನಾಗರಿಕರು ಶ್ಲಾಘಿಸಿದ್ದಾರೆ.