ಪಶ್ಚಿಮ ಘಟ್ಟದಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ?

ಪಶ್ಚಿಮ ಘಟ್ಟದಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ?
ಪಶ್ಚಿಮ ಘಟ್ಟದಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ?
Published on

| ಹರಿಪ್ರಸಾದ್ ನಂದಳಿಕೆ ಕಾರ್ಕಳ (ಉಡುಪಿ)

ಪಶ್ಚಿಮಘಟ್ಟದ ಸೂಕ್ಷ್ಮಪರಿಸರದಲ್ಲಿ ಮತ್ತೊಂದು ಬೃಹತ್ ಜಲವಿದ್ಯುತ್ ಯೋಜನೆಗೆ ವೇದಿಕೆ ಸಿದ್ಧವಾಗುತ್ತಿದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕೆಪಿಸಿಎಲ್) 8,288 ಕೋಟಿ ರೂ. ವೆಚ್ಚದಲ್ಲಿ 2,500 ಮೆಗಾವಾಟ್ ಸಾಮರ್ಥ್ಯದ ‘ವಾರಾಹಿ ಪಂಪ್ಡ್ ಸ್ಟೋರೇಜ್’ ಯೋಜನೆಗೆ ಮುಂದಾಗಿದ್ದು, ಈ ಸಂಬಂಧ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸಮೀಕ್ಷೆಗಾಗಿ ಪ್ರಸ್ತಾವನೆ ಸಲ್ಲಿಸಿದೆ

ಈ ಮಹತ್ವಾ ಕಾಂಕ್ಷೆಯ ಯೋಜನೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲಿದ್ದರೂ, ಉಡುಪಿ ಜಿಲ್ಲೆಗೆ ಹಬ್ಬಿರುವ ಪಶ್ಚಿಮಘಟ್ಟದ ಹಸಿರು ಸಿರಿಗೆ ಮತ್ತು ಸೋಮೇಶ್ವರ ಹಾಗೂ ಮೂಕಾಂಬಿಕಾ ವನ್ಯಜೀವಿ ಧಾಮಗಳ ಅಖಂಡತೆಗೆ ಹೊಡೆತ ಬೀಳುವ ಆತಂಕ ಎದುರಾಗಿದೆ. ಈ ಯೋಜನೆ ಸೋಮೇಶ್ವರ ಹಾಗೂ ಮೂಕಾಂಬಿಕಾ ವನ್ಯಜೀವಿ ಧಾಮಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಕುಂದಾಪುರ, ಬೈಂದೂರು, ಹೆಬ್ರಿ ಹಾಗೂ ಕರಾವಳಿ ಭಾಗದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಬಹುದು ಎಂದು ಪರಿಸರ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಅಪರೂಪದ ಪ್ರಭೇದಕ್ಕೆ ಎದುರಾಗಿದೆ ಆಪತ್ತು!

ಯೋಜನಾ ಪ್ರದೇಶದಲ್ಲಿ ಹುಲಿ, ಚಿರತೆ, ಕಾಡಾನೆ, ಕಾಡೆಮ್ಮೆ, ಜಿಂಕೆ, ಕಾಡುಹಂದಿ, ಕಾಡುನಾಯಿ, ಮಲಬಾರ್ ದೈತ್ಯ ಅಳಿಲು, ಸಿಂಹಬಾಲದ ಮಂಗ, ಮಲಬಾರ್ ಸಿವೆಟ್ ಸೇರಿದಂತೆ ಅನೇಕ ಅಪರೂಪದ ಸಸ್ತನಿಗಳು ವಾಸಿಸುತ್ತಿವೆ. ಪಕ್ಷಿಗಳಲ್ಲಿ ಗ್ರೇಟ್ ಹಾರ್ನ್​ಬಿಲ್, ಮಲಬಾರ್ ಗ್ರೇ ಹಾರ್ನ್​ಬಿಲ್, ಮಲಬಾರ್ ಟ್ರೋಗನ್ ಸೇರಿದಂತೆ ಹಲವು ಅಪರೂಪದ ಪ್ರಭೇದಗಳ ಆಶ್ರಯ ತಾಣವಾಗಿದೆ. ಹೀಗಾಗಿ ಅಪರೂಪದ ಸಸ್ತನಿಗಳು, ಪ್ರಾಣಿಪಕ್ಷಿಗಳ ವಾಸಕ್ಕೂ ಆಪತ್ತು ಎದುರಾಗುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net