ಪ್ಲಾಸ್ಟಿಕ್ ನಿಷೇಧಕ್ಕೆ ಸಾರ್ವಜನಿಕರ ಸಹಕಾರ

 ಏಕಬಳಕೆಯ ಪ್ಲಾಸ್ಟಿಕ್ ನಿಷೇಧದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಂಗವಾಗಿ ಮೂರು ಕಾವೇರಿಯಿಂದ ಕಿನ್ನಿಗೋಳಿಯ ತನಕ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ನಡೆಯಿತು.
ಏಕಬಳಕೆಯ ಪ್ಲಾಸ್ಟಿಕ್ ನಿಷೇಧದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಂಗವಾಗಿ ಮೂರು ಕಾವೇರಿಯಿಂದ ಕಿನ್ನಿಗೋಳಿಯ ತನಕ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ನಡೆಯಿತು.
Published on
ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಸ್ವಚ್ಛಭಾರತ್ ಮಿಷನ್-2(ನಗರ) ಯೋಜನೆಯಡಿಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಏಕಬಳಕೆಯ ಪ್ಲಾಸ್ಟಿಕ್ ನಿಷೇಧದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಂಗವಾಗಿ ಮೂರು ಕಾವೇರಿಯಿಂದ ಕಿನ್ನಿಗೋಳಿಯ ತನಕ ಕಾಲ್ನಡಿಗೆ ಜಾಥಾ ನಡೆಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ ಮಾತನಾಡಿ, ಪ್ಲಾಸ್ಟಿಕ್‌ನಿಂದ ಆಗುವ ಸಮಸ್ಯೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮುಂದಿನ ಒಂದು ತಿಂಗಳ ಕಾಲ ಸಂತೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಿದ್ದು, ಕಿನ್ನಿಗೋಳಿ ಪ.ಪಂ. ಮಾದರಿಯಾಗುವ ನಿಟ್ಟಿನಲ್ಲಿ ಸಾರ್ವಜನಿಕರು ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಹೇಳಿದರು.
ಪರಿಸರ ಹಾಗೂ ಪ್ರವಾಸೋಧ್ಯಮ ಮಂಡಳಿ ಅಧ್ಯಕ್ಷ ಶಾಲೆಟ್ ಪಿಂಟೋ ಮಾತನಾಡಿ, ಆಧುನಿಕತೆಯ ಧಾವಂತದಲ್ಲಿ ನಾವು ಪರಿಸರ ಹಾಗೂ ನಮ್ಮತನವನ್ನು ಮರೆತುಬಿಡುತ್ತಿದ್ದು ಗಾಳಿಯನ್ನು ಸಿಲಿಂಡರ್‌ನಲ್ಲಿಟ್ಟು ಬದುಕಬೇಕಾದ ದಿನಗಳು ದೂರವಿಲ್ಲ ಎಂದರು.
ಪ.ಪಂ. ಮುಖ್ಯಾಧಿಕಾರಿ ಜಯಶಂಕರ್, ಪಾಂಪೆ ಕಾಲೇಜಿನ ಪ್ರಾಚಾರ‌್ಯ ಡಾ.ಪುರುಷೋತ್ತಮ ಕೆ.ವಿ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ರೋಟರಿ ಅಧ್ಯಕ್ಷ ಸಾಯಿನಾಥ ಶೆಟ್ಟಿ, ಉದ್ಯಮಿ ದೀಪಕ್ ರೋಡ್ರಿಗಸ್, ಸ್ಟೇನಿ ಪಿಂಟೋ ಕಿನ್ನಿಗೋಳಿ, ಪಪಂ ಸದಸ್ಯರಾದ ಶೈಲೇಶ್ ಅಂಚನ್, ಪ್ರಣೀಕ್ ಕೋಟ್ಯಾನ್, ದಾಮೋದರ ಶೆಟ್ಟಿ, ಸುನೀತಾ ರೋಡ್ರಿಗಸ್, ಪ್ರಕಾಶ್ ಆಚಾರ್, ಗೋಪಾಲಕೃಷ್ಣ ಪುನರೂರು, ಕುಶಲತಾ, ಕೋಕಿಲ, ಕಾರ್ಯಕ್ರಮಕ್ಕೆ ಸಹಕಾರ ನೀಡುವ ಸಂಸ್ಥೆಯ ಫೀಲ್ಡ್ ಸುಪರ್‌ವೈಸರ್ ರವೀಂದ್ರ ಡಿಎಸ್, ಸುಬಾಷ್ ಸಾಗರ್, ಕೋರ್ಡಿನೇಟರ್ ಅಭಿಷೇಕ್ ಪಂಡಿತ್ ಹಾಗೂ ಶಾಲಾ ಮುಖ್ಯಸ್ಥರು ಉಪಸ್ಥಿತರಿದ್ದರು. ಜಾಥಾ ಮೂರುಕಾವೇರಿಯಿಂದ ಕಿನ್ನಿಗೋಳಿ ಪೇಟೆಯಲ್ಲಿ ಸಾಗಿ ಬಸ್ಸು ನಿಲ್ದಾಣದಲ್ಲಿ ಸಮಾಪನಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net