ಕಾರ್ನಾಡಿನ ಸಿಎಸ್‌ಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರವನ್ನು ಉದ್ಯಮಿ ವಾಸು ಪೂಜಾರಿ ಚಿತ್ರಾಪು ಉದ್ಘಾಟಿಸಿದರು. ಶಾಂಭವಿ ಜೇಸಿ ಟ್ರಸ್ಟ್ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷೆ ಭಾನುವತಿ ಶೆಟ್ಟಿ ಕಕ್ವಗುತ್ತು, ಹರ್ಷರಾಜ್ ಶೆಟ್ಟಿ ಜಿ.ಎಂ. ಮೊದಲಾದವರಿದ್ದರು.
ಮೂಲ್ಕಿ: ಆರೋಗ್ಯ ಶಿಬಿರ ಸಾರ್ವಜನಿಕರಿಗೆ ಉಚಿತವಾಗಿ ವೈದ್ಯಕೀಯ ತಪಾಸಣೆ ಮೂಲಕ ರೋಗ ಪತ್ತೆ, ಚಿಕಿತ್ಸೆಯ ಜನಪರ ಕಾರ್ಯಕ್ರಮವಾಗಿದೆ. ಇದು ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಮತ್ತು ಬಡವರಿಗೆ ತುಂಬಾ ಸಹಾಯ ಮಾಡುತ್ತದೆ ಎಂದು ಉದ್ಯಮಿ ವಾಸು ಪೂಜಾರಿ ಚಿತ್ರಾಪು ಹೇಳಿದರು.
ಮೂಲ್ಕಿ ಶಾಂಭವಿ ಜೇಸಿ ಟ್ರಸ್ಟ್, ರೋಟರಿ ಕ್ಲಬ್ ಆಶ್ರಯದಲ್ಲಿ ಮಂಗಳೂರಿನ ದೇರಳಕಟ್ಟೆ, ಕೆ.ಎಸ್.ಹೆಗ್ಡೆ ಆಸ್ಪತ್ರೆ, ಕುಂಟಿಕಾನ ಎ.ಜೆ. ಇನ್‌ಸ್ಟಿಟ್ಯೂಟ್ ಆ್ ಡೆಂಟಲ್ ಸೈನ್ಸಸ್ ಸಹಕಾರದೊಂದಿಗೆ ಕಾರ್ನಾಡಿನ ಸಿಎಸ್‌ಐ ಆಂಗ್ಲ ಮಾಧ್ಯಮ ಶಾಲೆಯಲ್ಲಿಆರೋಗ್ಯ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶಾಂಭವಿ ಜೇಸಿ ಟ್ರಸ್ಟ್ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷೆ ಭಾನುವತಿ ಶೆಟ್ಟಿ ಕಕ್ವಗುತ್ತು, ಹರ್ಷರಾಜ್ ಶೆಟ್ಟಿ ಜಿ.ಎಂ., ಸಿಎಸ್‌ಐ ಶಾಲೆ ಸಂಚಾಲಕ ರಂಜನ್ ಜತ್ತನ್ನ, ಮುಖ್ಯ ಶಿಕ್ಷಕಿ ಶಾಂತಿ ಸುಹಾಸಿನಿ ಕರ್ಕಡ, ಡಾ.ಅಭಿಷೇಕ್ ಉಪಸ್ಥಿತರಿದ್ದರು. ದಿನೇಶ್ ಕೆ.ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವನಾಥ್ ಶೆಣೈ ಪ್ರಸ್ತಾವನೆಗೈದರು. ಟ್ರಸ್ಟಿ ನವೀನ್ ಶೆಟ್ಟಿ ವಂದಿಸಿದರು.
ಶಾಂಭವಿ ಜೇಸಿ ಟ್ರಸ್ಟಿಗಳಾದ ಸುರೇಶ್ ರಾವ್, ಅನಿಲ್ ಕುಮಾರ್ ಕೊಲೆಕಾಡಿ, ದೇವಪ್ರಸಾದ್ ಪುನರೂರು, ಮೊಹಮ್ಮದ್ ಹಬಿಬುಲ್ಲ, ಚಂದ್ರಶೇಖರ್ ಜೆ.ಇ., ಭುಜಂಗ ಕವತ್ತಾರು, ಸರೋಜಿನಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.