ಸಮನ್ವಯ ಸಾಧಿಸಲು ಜನಸಂಪರ್ಕ ಸಭೆ

 ಕೋಟ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಾತನಾಡಿದರು. ಪ್ರಮುಖರಾದ ಶ್ರೀಕಾಂತ್ ಎಸ್.ಹೆಗ್ಡೆ, ಪ್ರತಾಪಶ್ಚಂದ್ರ ಶೆಟ್ಟಿ, ಮಹಂತೇಶ್ ಇದ್ದರು.
ಕೋಟ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಾತನಾಡಿದರು. ಪ್ರಮುಖರಾದ ಶ್ರೀಕಾಂತ್ ಎಸ್.ಹೆಗ್ಡೆ, ಪ್ರತಾಪಶ್ಚಂದ್ರ ಶೆಟ್ಟಿ, ಮಹಂತೇಶ್ ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಕೋಟ
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಜನಸಂಪರ್ಕ ಸಭೆ ಆಯೋಜಿಸಿ ಪರಿಹಾರ ಕಂಡುಕೊಳ್ಳಲು ವೇದಿಕೆ ಸೃಷ್ಟಿಸಲಾಗಿದೆ. ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಜನಸಂಪರ್ಕ ಸಭೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಕೋಟ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಾರ್ವಜನಿಕ ಅಹವಾಲು ಸ್ವೀಕಾರಕ್ಕಾಗಿ ಆಯೋಜಿಸಿದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ನಿವೃತ್ತ ಶಿಕ್ಷಕ ಹಂದಕುಂದ ಸೋಮಶೇಖರ್ ಶೆಟ್ಟಿ, ಹೊಳೆ ಹೂಳು ತೆರವು, ಕೇಂದ್ರ ಸರ್ಕಾರದ ಜಲಜೀವನ್ ಯೋಜನೆಯಡಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಸಕರಲ್ಲಿ ಪ್ರಸ್ತಾಪಿಸಿದರು. ಮಣೂರು ಪಡುಕರೆಯ ಉಪ್ಪು ನೀರಿನ ಹೊಳೆಯಲ್ಲಿ ಕಾಂಡ್ಲಾ ಗಿಡಗಳು ಹೊಳೆಯನ್ನು ಆವರಿಸಿಕೊಂಡಿದೆ. ಇದರಿಂದ ನೀರು ಸರಾಗವಾಗಿ ಹರಿಯದೆ ನೂರಾರು ಎಕರೆ ಕೃಷಿ ಭೂಮಿ ಕೃತಕ ನೆರೆಗೆ ಸಿಲುಕುತ್ತಿದೆ ಎಂದು ಪಂಚಾಯಿತಿ ವಾಜಿ ಸದಸ್ಯ ಭುಜಂಗ ಗುರಿಕಾರ ತಿಳಿಸಿದರು. ಸಮಸ್ಯೆ ಬಗೆಹರಿಸುವ ಬಗ್ಗೆ ಶಾಸಕರು ಭರವಸೆ ನೀಡಿದರು.

ರಸ್ತೆಯದ್ದೇ ಸಮಸ್ಯೆ

ಜನಸಂಪರ್ಕ ಸಭೆಯಲ್ಲಿ ಮುಕ್ಕಾಲು ಭಾಗ ಸ್ಥಳೀಯ ರಸ್ತೆಗಳ ಸಮಸ್ಯೆ ಶಾಸಕರನ್ನು ಹೈರಾಣಗೊಳಿಸಿತು. ರಸ್ತೆ ಸಮಸ್ಯೆಗಳ ಬಗ್ಗೆ ಆಯಾ ಭಾಗದ ಜನಸಾವಾನ್ಯರು ಶಾಸಕರ ಬಳಿ ಅಳಲು ತೋಡಿಕೊಂಡರು.
ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ, ಕೋಟ ಪಂಚಾಯಿತಿ ಆಡಳಿತ ಅಧಿಕಾರಿ ಪ್ರತಾಪಶ್ಚಂದ್ರ ಶೆಟ್ಟಿ, ಕೋಟ ಕ್ರೈಂ ವಿಭಾಗದ ಎಸ್‌ಐ ಮಹಂತೇಶ್, ಪಿಡಿಒ ಉಮೇಶ್, ತಾಲೂಕು ಪಂಚಾಯಿತಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಕುವಾರ್ ಉಪಸ್ಥಿತರಿದ್ದರು.

ರೆಸಾರ್ಟ್‌ಗಳಿಂದ ಸಮಸ್ಯೆ

ಮಣೂರು ಪಡುಕರೆ ಭಾಗದ ಹಲವು ರೆಸಾರ್ಟ್‌ಗಳಿಂದ ಮೀನುಗಾರಿಕೆಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮೀನುಗಾರರು ಶಾಸಕರ ಗಮನಕ್ಕೆ ತಂದರು. ಬೀಚ್ ಸಮೀಪದ ಸರ್ಕಾರಿ ಸ್ಥಳಗಳನ್ನು ಒತ್ತುವರಿ ಮಾಡಿ, ಗೇಟ್ ಅಳವಡಿಸಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೊಂದರೆ ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೀನುಗಾರರು ಮನವಿ ವಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net