

ಉಡುಪಿ: ಜನ ಸೇವೆಯೇ ಈಶ ಸೇವೆ ಎಂದು ನಂಬಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಾಗೂ ತನ್ನಿಮಿತ್ತ ಸೇವಾ ಸಂಕಲ್ಪ ಅಭಿಯಾನ ಮುಂದುವರಿಸಿದ್ದೇವೆ. ತನ್ನಿಮಿತ್ತ 'ಅಪ್ಪ-ಅಮ್ಮ ಅನಾಥಾಲಯ'ದಲ್ಲಿ ಹಮ್ಮಿಕೊಂಡಿರುವ ಅನ್ನದಾನ ಮತ್ತು ಸಹ ಭೋಜನ ಪುಣ್ಯದ ಕಾರ್ಯವಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಹಾಗೂ ಅವರ ಜನಸೇವೆಯ ಆಡಳಿತದ 25 ವರ್ಷದ ಹಿನ್ನೆಲೆಯಲ್ಲಿ 'ಸೇವಾ ಸಂಕಲ್ಪ ಅಭಿಯಾನ'ದಡಿ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ವತಿಯಿಂದ ಬ್ರಹ್ಮಾವರದ ಕೂರಾಡಿಯಲ್ಲಿರುವ 'ಅಪ್ಪ- ಅಮ್ಮ ಅನಾಥಾಲಯ'ದಲ್ಲಿ ಬುಧವಾರ (ಸೆ.23) ಆಯೋಜಿಸಿದ್ದ 'ಅನ್ನದಾನ ಮತ್ತು ಸಹ ಭೋಜನ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಡಿ.ಬಿ. ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು.
ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ್ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ್ ಕೈಪುಂಜಾಲು, ಜಿಲ್ಲಾ ಉಪಾಧ್ಯಕ್ಷರಾದ ಹಿರಿಯಣ್ಣ ಅಮ್ಮುಂಜೆ, ಅನಿತಾ ಸಾಲ್ಯಾನ್, ಜಿಲ್ಲಾ ಕಾರ್ಯದರ್ಶಿಗಳಾದ ಸದಾನಂದ ಚಾಂತಾರು, ಸುರೇಶ್ ಮೂಡುಬಗೆ, ಸುಂದರ್ ಬಿ. ಕಾರ್ಕಳ, ಉಡುಪಿ ಗ್ರಾಮಾಂತರ ಅಧ್ಯಕ್ಷ ಗಿರಿಧರ್ ಬ್ರಹ್ಮಾವರ, ಕಾರ್ಯಕಾರಿಣಿ ಸದಸ್ಯೆ ರೇವತಿ ಮಟಪಾಡಿ, ಮಾಜಿ ಜಿಲ್ಲಾಧ್ಯಕ್ಷ ಗೋಪಾಲ್ ಕಳಂಜೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸದಾನಂದ್ ಬಳ್ಕೂರು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಬಿಜೆಪಿ ಉಡುಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ದೇವಾನಂದ ನಾಯಕ್, ಮಹಿಳಾ ಮೋರ್ಚಾ ಉಡುಪಿ ಗ್ರಾಮಾಂತರ ಅಧ್ಯಕ್ಷೆ ರಮ್ಯಾ ರಾವ್ ಉಪಸ್ಥಿತರಿದ್ದರು.
ಎಸ್ಸಿ ಮೋರ್ಚಾ ಬೈಂದೂರು ಅಧ್ಯಕ್ಷ ಅಶೋಕ್ ಎನ್.ಡಿ., ಉಪಾಧ್ಯಕ್ಷ ಪ್ರವೀಣ್ ಗುಡ್ಡೆಯಂಗಡಿ, ಪ್ರಧಾನ ಕಾರ್ಯದರ್ಶಿ ಅಕ್ಷಯ್, ಕುಂದಾಪುರ ಅಧ್ಯಕ್ಷ ಮಂಜುನಾಥ್ ಬಳ್ಕೂರು, ಉಡುಪಿ ಗ್ರಾಮಾಂತರ ಉಪಾಧ್ಯಕ್ಷ ಪುಷ್ಪರಾಜ್ ಉಳ್ಳಾಲ, ಜಿಲ್ಲಾ ಎಸ್ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಯಶೋದಾ ಹಿರಿಯಡ್ಕ, ನಾಗರತ್ನಾ ಕುಂದಾಪುರ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.