ಆರೋಗ್ಯ, ಶಿಕ್ಷಣ, ಅರಣ್ಯ, ಪಂಚಾಯತ್ ರಾಜ್ನಂತಹ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಕೊರಗ ಸಮುದಾಯದ ವಿದ್ಯಾವಂತ ಯುವಕ&ಯುವತಿಯರಿಗೆ ಅವಕಾಶ ಕಲ್ಪಿಸಬೇಕು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿ ಜಿಲ್ಲಾಧಿಕಾರಿ ಮೂಲಕ ಧರಣಿ ನಿರತ ಕೊರಗರನ್ನು ಭೇಟಿ ಮಾಡಬೇಕು. ಅವರೊಂದಿಗೆ ಸಮಕ್ಷಮ ಸಭೆ ಏರ್ಪಡಿಸಿ, ನಿಜಕ್ಕೂ ಬಡವರಾಗಿರುವ ಕೊರಗರಿಗೆ ಸಾಮಾಜಿಕ ನ್ಯಾಯ ನೀಡಬೇಕು ಎಂದು ಸಿಎಂಗೆ ಬರೆದ ಪತ್ರದಲ್ಲಿ ಸಂಸದ ಕೋಟ ಆಗ್ರಹಿಸಿದ್ದಾರೆ.