ಸಮುದಾಯಕ್ಕೆ ಸವಲತ್ತುಗಳ ಮಾಹಿತಿ ನೀಡಿ

 ಶ್ರೀ ಆದಿನಾಥಸ್ವಾಮಿ ಜಿನ ಚೈತ್ಯಾಲಯದಲ್ಲಿ ಡಾ.ಜಯಕೀರ್ತಿ ಜೈನ್ ಬೆಳ್ತಂಗಡಿ ಮಾತನಾಡಿದರು. ರಾಜೇಂದ್ರ ಜೈನ್ ಪೆರ್ಲ,  ಶ್ರಾವಕಿ ಬ್ರಾಹ್ಮಿಲಾ ಜೈನ್ ಮೊದಲಾದವರಿದ್ದರು.
ಶ್ರೀ ಆದಿನಾಥಸ್ವಾಮಿ ಜಿನ ಚೈತ್ಯಾಲಯದಲ್ಲಿ ಡಾ.ಜಯಕೀರ್ತಿ ಜೈನ್ ಬೆಳ್ತಂಗಡಿ ಮಾತನಾಡಿದರು. ರಾಜೇಂದ್ರ ಜೈನ್ ಪೆರ್ಲ, ಶ್ರಾವಕಿ ಬ್ರಾಹ್ಮಿಲಾ ಜೈನ್ ಮೊದಲಾದವರಿದ್ದರು.
Published on
ಬಂಟ್ವಾಳ: ಜೈನ ಸಮುದಾಯವು ಅಲ್ಪಸಂಖ್ಯಾತರಿಗೆ ಸಿಗುವ ಹಲವಾರು ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಜೈನ್ ಮಿಲನ್ ಸಹಾಯಹಸ್ತ ನೀಡಬೇಕು. ವಿವಿಧ ಸವಲತ್ತು ಮಾಹಿತಿಯನ್ನು ಜೈನ್ ಮಿಲನ್ ನೀಡುವ ಮೂಲಕ ಸಮಾಜದ ಸ್ಥಿತಿ ಉತ್ತಮಪಡಿಸಲು ಸಹಕರಿಸಬೇಕೆಂದು ವಿಶ್ರಾಂತ ಪಶುವೈದ್ಯಾಧಿಕಾರಿ ಹಾಗೂ ಧಾರ್ಮಿಕ ಸಂಘಟಕ ಡಾ.ಜಯಕೀರ್ತಿ ಜೈನ್ ಬೆಳ್ತಂಗಡಿ ಹೇಳಿದರು.
ಬಂಟ್ವಾಳ ಬಸದಿಯಲ್ಲಿ ಭಾರತೀಯ ಜೈನ್ ಮಿಲನ್ ಏರ್ಪಡಿಸಿದ ಧಾರ್ಮಿಕ ಸಭೆಯಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಭ.1008 ಶ್ರೀ ಆದಿನಾಥ ಜಿನ ಚೈತ್ಯಾಲಯದ ಜಿನಬಿಂಬ ಪ್ರತಿಷ್ಠಾಪನಾ ಮಹೋತ್ಸವದ 57ನೇ ವರ್ಧಂತ್ಯುತ್ಸವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ತೋರಣ ಮುಹೂರ್ತ, ಬಸದಿಯ ವಿಮಾನ ಶುದ್ಧಿ ಮತ್ತು 24 ತೀರ್ಥಂಕರರ ಆರಾಧನೆ, ದ್ರವ್ಯಾಭಿಷೇಕವು ಬಂಟ್ವಾಳ ಶ್ರೀ ಆದಿನಾಥಸ್ವಾಮಿ ಜಿನ ಚೈತ್ಯಾಲಯದಲ್ಲಿ ಭಾನುವಾರ ಜರುಗಿತು.
ಪರಮ ಪೂಜ್ಯ 108 ಮುನಿಶ್ರೀ ಆದಿತ್ಯಸಾಗರ ಮಹಾರಾಜರ ಆಶೀರ್ವಾದದೊಂದಿಗೆ ಪ್ರತಿಷ್ಠಾಪನೆಗೊಂಡ 24 ತೀರ್ಥಂಕರರ ರತ್ನ ಬಿಂಬಗಳಿಗೆ ಶ್ರಾವಕರಿಂದ ವಿಶೇಷ ದ್ರವ್ಯ ಅಭಿಷೇಕ ಪುರೋಹಿತ ಪುಷ್ಪರಾಜ ಇಂದ್ರರ ನೇತೃತ್ವದಲ್ಲಿ ನೆರವೇರಿತು. 54 ಕಲಶ ಅಭಿಷೇಕ, ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ ಅಲಂಕಾರ ಪೂಜೆ, ಕ್ಷೇತ್ರಪಾಲ ಪೂಜೆ, ವಿವಿಧ ಧಾರ್ಮಿಕ ವಿಧಿವಿಧಾನದೊಂದಿಗೆ ಸಂಪನ್ನಗೊಂಡಿತು. ಭಗವಾನ್ ದಾಸ್ ಮತ್ತು ಮಕ್ಕಳಿಂದ ಬಸದಿಗೆ ಅಷ್ಟಮಂಗಳ ಸಮರ್ಪಣೆ ನಡೆಯಿತು. ಶ್ರಾವಕ-ಶ್ರಾವಕಿಯರು ಜಿನಮಂತ್ರ ಪಠಿಸಿದರು.
ಬಂಟ್ವಾಳ ಜೈನ್ ಮಿಲನ್ ಅಧ್ಕಕ್ಷ ರಾಜೇಂದ್ರ ಜೈನ್ ಪೆರ್ಲ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶ್ರಾವಕಿ ಬ್ರಾಹ್ಮಿಲಾ ಜೈನ್ ಅವರನ್ನು ಜೈನ್ ಮಿಲನ್ ವತಿಯಿಂದ ಸನ್ಮಾನಿಸಲಾಯಿತು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷ ಸುದರ್ಶನ್ ಜೈನ್, ಕಾರ್ಯದರ್ಶಿ ಜಯಕೀರ್ತಿ ಇಂದ್ರ, ಭಗವಾನ್ ದಾಸ್, ಸುರೇಂದ್ರ ಧರ್ಮಸ್ಥಳ, ನಿವೃತ್ತ ಶಿಕ್ಷಕ ಜಯಾನಂದ ಪೆರಾಜೆ ಉಪಸ್ಥಿತರಿದ್ದರು.

ಜೈನ್ ಮಿಲನ್ ವಲಯ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಪ್ರಸ್ತಾವನೆಗೈದರು, ಕಾರ್ಯದರ್ಶಿ ಜಯಕೀರ್ತಿ ಸ್ವಾಗತಿಸಿದರು. ಹರ್ಷರಾಜ ಬಳ್ಳಾಲ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net