ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡಿ

 ಶಿರ್ವ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.
ಶಿರ್ವ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.
Published on
ಶಿರ್ವ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಆರ್ಥಿಕ ಸಮಸ್ಯೆ ಕಾರಣವಾಗಬಾರದು. ಸವಾಜದಲ್ಲಿ ಉತ್ತಮ ಆದಾಯವಿರುವ ವ್ಯಕ್ತಿಗಳು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ನೆರವು ನೀಡಿ ಪ್ರೋತ್ಸಾಹಿಸಬೇಕು ಎಂದು ಮುಂಬೈ ವಿ.ಕೆ. ಗ್ರೂಪ್ ಆಫ್ ಕಂಪೆನಿಸ್‌ನ ಆಡಳಿತ ನಿರ್ದೇಶಕ ಕೆ.ಎಂ.ಶೆಟ್ಟಿ ಹೇಳಿದರು.
ಶಿರ್ವ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ ಹತ್ತೊಂಭತ್ತನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ವಾತನಾಡಿದರು.
ಕಾಪು ತಹಸೀಲ್ದಾರ್ ಅನಂತ ಶಂಕರ್ ಬಿ. ಮಾತನಾಡಿ, ವಿದ್ಯಾರ್ಥಿಗಳು ಕಡಿಮೆ ಅಂಕ ಬಂದಾಗ ಧೈರ್ಯಗೆಡದೆ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಪ್ರಯತ್ನಿಸಬೇಕು ಹಾಗೂ ಪಾಲಕರು ಇದಕ್ಕೆ ಪ್ರೇರಕರಾಗಬೇಕು ಎಂದರು.
ಕಾಪು ಶಾಸಕ, ವಿದ್ಯಾವರ್ಧಕ ಸಂ ಅಧ್ಯಕ್ಷ ಸುರೇಶ್ ಪಿ.ಶೆಟ್ಟಿ ಗುರ್ಮೆ ಮಾತನಾಡಿದರು.
ವಿಧೂಷಿ ವೀಣಾ ಮುರಳೀಧರ ಸಾಮಗ ವಿಜೇತ ವಿದ್ಯಾರ್ಥಿಗಳಿಗೆ ಬಹುವಾನ ನೀಡಿ ಶುಭ ಹಾರೈಸಿದರು. ಕೋಶಾಧಿಕಾರಿ ಜಗದೀಶ ಅರಸ ಉಪಸ್ಥಿತರಿದ್ದರು.
ಮಟ್ಟಾರು ರತ್ನಾಕರ ಹೆಗ್ಡೆ ಪ್ರಾಸ್ತಾವಿಸಿದರು. ಪ್ರೊ.ವೈ.ಭಾಸ್ಕರ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ನೀಶಾ ಶೆಟ್ಟಿ ವರದಿ ವಾಚಿಸಿದರು. ನಿಮಿತಾ ಶೆಟ್ಟಿ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವಿದ್ಯಾರ್ಥಿ ಅನುಜ್ ಕಾಮತ್ ಸ್ವಾಗತಿಸಿ, ಅರ್ಜುನ್ ಆರ್.ಪ್ರಭು ವಂದಿಸಿದರು. ಮಿಷ್ಕ ಬಿ.ಶೆಟ್ಟಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net