ಸಮಗ್ರ ಪ್ರಶಸ್ತಿಯಿಂದ ಹೆಮ್ಮೆ

 ಕಾರ್ಕಳ ತಾಲೂಕು ಸಮಗ್ರ ಪ್ರಶಸ್ತಿ ಪಡೆದ ಹೆರ್ಗ ವಿಠಲಶೆಟ್ಟಿ ಪ್ರೌಢಶಾಲೆ ಕುಚ್ಚೂರು ವಿದ್ಯಾರ್ಥಿಗಳು.
ಕಾರ್ಕಳ ತಾಲೂಕು ಸಮಗ್ರ ಪ್ರಶಸ್ತಿ ಪಡೆದ ಹೆರ್ಗ ವಿಠಲಶೆಟ್ಟಿ ಪ್ರೌಢಶಾಲೆ ಕುಚ್ಚೂರು ವಿದ್ಯಾರ್ಥಿಗಳು.
Published on
ಹೆಬ್ರಿ: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯೊಂದಿಗೆ ಕಲಿಕೆಯಲ್ಲಿ ಮುಂದೆ ಬರಬೇಕು. ಶಾಲೆ ಸತತ 19 ವರ್ಷಗಳಿಂದ ಸಮಗ್ರ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿ. ಈ ಸರ್ಕಾರಿ ಶಾಲೆಗೆ ನನ್ನ ಸಹಕಾರ ಸದಾ ಇರುತ್ತದೆ ಎಂದು ಕುಚ್ಚೂರು ಹೆರ್ಗ ವಿಠಲಶೆಟ್ಟಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಿ.ಹರ್ಷ ಶೆಟ್ಟಿ ಹೇಳಿದರು.
ಕುಕ್ಕುಜೆಯಲ್ಲಿ ಇತ್ತೀಚೆಗೆ ನಡೆದ ಕಾರ್ಕಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಕುಚ್ಚೂರಿನ ಹೆರ್ಗ ವಿಠಲಶೆಟ್ಟಿ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಜಿಲ್ಲಾ ಮಟ್ಟಕ್ಕೆ 22 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಮುಖ್ಯಶಿಕ್ಷಕ ಪ್ರಭಾವತಿ, ಶಿಕ್ಷಕರಾದ ಮಲ್ಲಿಕಾರ್ಜುನ, ಶಿವಾನಂದ ಶೆಟ್ಟಿ, ಸುರೇಶ್ ದೇವಾಡಿಗ, ಜಯರಾಮ್ ಶೆಟ್ಟಿ, ಗಣೇಶ್, ತುಳಸಿ, ರೇವತಿ, ಕಮಲಿನಿ, ವಿಜಯಕುಮಾರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net