ಪೊಲ್ಯ ಬರ್ಪಾಣೆ ರಸ್ತೆ ದುರಸ್ತಿಗೆ ಪ್ರತಿಭಟನೆ

ಪೊಲ್ಯ ಬರ್ಪಾಣೆ ಸಂಪರ್ಕ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ಉಚ್ಚಿಲ ಗ್ರಾಮ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರಮುಖರಾದ ರಜಾಕ್ ವೈಎಸ್, ಮಜೀದ್ ಪೊಲ್ಯ, ತೌಫಿಕ್ ಉಚ್ಚಿಲ, ಹರ್ಷ ಇಬ್ರಾಹಿಂ, ಆಸಿಫ್ ವೈ.ಸಿ., ಶರೀಫ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಎರಡು ವರ್ಷಗಳಿಂದ ಹದಗೆಟ್ಟ ಸಂಪೂರ್ಣ ರಸ್ತೆ
  • ದ್ವಿಚಕ್ರ ವಾಹನ ಸವಾರರು, ಶಾಲಾ ವಿದ್ಯಾರ್ಥಿಗಳಿಗೆ ಸಂಕಷ್ಟ
  • ಸಂಸದರು, ಶಾಸಕರಿಗೂ ಮನವಿ
ಪಡುಬಿದ್ರಿ: ಉಚ್ಚಿಲ ಬಡಾ ಗ್ರಾಮದ 2ನೇ ವಾರ್ಡ್‌ನ ಪೊಲ್ಯ ಬರ್ಪಾಣೆ ಸಂಪರ್ಕ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ಉಚ್ಚಿಲ ಗ್ರಾಮ ಸಮಿತಿ ವತಿಯಿಂದ ಉಚ್ಚಿಲದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಎರಡು ವರ್ಷಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಸಂದರ್ಭ ರಸ್ತೆಯಲ್ಲಿ ಗುಂಡಿ ಉಂಟಾಗಿ ನೀರು ನಿಂತ ಪರಿಣಾಮ ದ್ವಿಚಕ್ರ ವಾಹನ ಸವಾರರು ಹಾಗೂ ಶಾಲಾ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ರಸ್ತೆ ದುರಸ್ತಿಗೊಳಿಸುವಂತೆ ಸಂಸದರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರೂ ಕೇವಲ ಭರವಸೆ ಮಾತ್ರ ಸಿಗುತ್ತಿದೆ. ತಕ್ಷಣ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಸ್‌ಡಿಪಿಐ ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ರಜಾಕ್ ವೈ.ಎಸ್., ಉಚ್ಚಿಲ ಗ್ರಾಮ ಸಮಿತಿ ಅಧ್ಯಕ್ಷ ಮಜೀದ್ ಪೊಲ್ಯ ಮಾತನಾಡಿದರು. ಪಿಡಿಒ ಸತೀಶ್ ಮನವಿ ಸ್ವೀಕರಿಸಿದರು. ಎಸ್‌ಡಿಪಿಐ ಕಾಪು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ತೌಫಿಕ್ ಉಚ್ಚಿಲ, ಉಪಾಧ್ಯಕ್ಷ ಹರ್ಷ ಇಬ್ರಾಹಿಂ, ಉಚ್ಚಿಲ ಗ್ರಾಮ ಸಮಿತಿ ಕಾರ್ಯದರ್ಶಿ ಆಸಿಫ್ ವೈ.ಸಿ., ಶರೀಫ್ ಇದ್ದರು.
------ಫೋಟೋ------
ಪಿಡಿಬಿ-ಮೇ15-4 ರೋಡ್
ಪೊಲ್ಯ ಬರ್ಪಾಣೆ ಸಂಪರ್ಕ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ಉಚ್ಚಿಲ ಗ್ರಾಮ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರಮುಖರಾದ ರಜಾಕ್ ವೈಎಸ್, ಮಜೀದ್ ಪೊಲ್ಯ, ತೌಫಿಕ್ ಉಚ್ಚಿಲ, ಹರ್ಷ ಇಬ್ರಾಹಿಂ, ಆಸಿಫ್ ವೈ.ಸಿ., ಶರೀಫ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net