ಕಾರ್ಕಳ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ

 ಕುಂಟಲ್ಪಾಡಿ ಅಂಬಾಭವಾನಿ ಹಾಗೂ ಗಾಳಿವಾರಿ ದೇವಸ್ಥಾನ ಜಾಗ ಒತ್ತುವರಿ ಖಂಡಿಸಿ ತಾಲೂಕು ಕಚೇರಿಯ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಗಂಗಾಧರ್ ಪಣಿಯೂರು, ಸುನೀಲ್ ಕೋಟ್ಯಾನ್, ಪ್ರಕಾಶ್ ರಾವ್ ಮತ್ತಿತರಿದ್ದರು.
ಕುಂಟಲ್ಪಾಡಿ ಅಂಬಾಭವಾನಿ ಹಾಗೂ ಗಾಳಿವಾರಿ ದೇವಸ್ಥಾನ ಜಾಗ ಒತ್ತುವರಿ ಖಂಡಿಸಿ ತಾಲೂಕು ಕಚೇರಿಯ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಗಂಗಾಧರ್ ಪಣಿಯೂರು, ಸುನೀಲ್ ಕೋಟ್ಯಾನ್, ಪ್ರಕಾಶ್ ರಾವ್ ಮತ್ತಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಾರ್ಕಳ
ದೇವಸ್ಥಾನಕ್ಕೆ ಹೋಗುವ ದಶಕಗಳ ಹಳೆಯ ರಸ್ತೆಯನ್ನು ನಾಶಪಡಿಸಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಲಾಗಿದೆ. ದೇವಸ್ಥಾನದ ಆಸುಪಾಸಿನ ಜಾಗವನ್ನು ಅತಿಕ್ರಮಣ ವಾಡಲಾಗಿದೆ ಮತ್ತು ಈ ಕಾರ್ಯಕ್ಕಾಗಿ ಸಾವಿರಾರು ಮರಗಳನ್ನು ಕಡಿಯಲಾಗಿದೆ. ಪುರಸಭೆಯಿಂದ ಡಾಂಬರುಗೊಂಡ ರಸ್ತೆಯನ್ನು ಅಗೆದು ತಡೆಬೇಲಿ ನಿರ್ಮಿಸಿರುವುದು ಖಂಡನೀಯ ಎಂದು ಕುಂಟಲ್ಪಾಡಿ ಗ್ರಾಮಸ್ಥ ಗಂಗಾಧರ ಪಣಿಯೂರು ಆಕ್ರೋಶ ವ್ಯಕ್ತಪಡಿಸಿದರು.
ಕುಂಟಲ್ಪಾಡಿ ಶ್ರೀ ಅಂಬಾಭವಾನಿ ಹಾಗೂ ಗಾಳಿವಾರಿ ದೇವಸ್ಥಾನದ ಆವರಣದಲ್ಲಿ ದೇವಸ್ಥಾನಕ್ಕೆ ಹೋಗದಂತೆ ಸುತ್ತಲೂ ಕಾಂಪೌಂಡ್ ಮತ್ತು ಅಕ್ರಮ ಲೇಔಟ್ ನಿರ್ಮಿಸಿ ಭಕ್ತರ ಪ್ರವೇಶಕ್ಕೆ ಅಡ್ಡಿಯುಂಟು ವಾಡುತ್ತಿರುವ ಖಾಸಗಿ ಜಾಗದವರ ವಿರುದ್ಧ ಕ್ರಮ ಕೈಗೊಂಡು, ಕಾಂಪೌಂಡ್ ತೆರವುಗೊಳಿಸುವಂತೆ ಒತ್ತಾಯಿಸಿ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಪುರಸಭಾ ವಾಜಿ ಸದಸ್ಯ ಸುನೀಲ್ ಕೊಟ್ಯಾನ್ ವಾತನಾಡಿ, ಮೂರು ದಿನಗಳ ಒಳಗಾಗಿ ಅತಿಕ್ರಮಣ ತೆರವುಗೊಳಿಸದಿದ್ದರೆ, ಅಳವಡಿಸಿರುವ ತಡೆಗೋಡೆಗಳನ್ನು ನಾವೇ ಕೆಡವುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್. ಹಾಗೂ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಭೇಟಿ ನೀಡಿ ಮನವಿ ಸ್ವೀಕರಿಸಿ, ಕಾರ್ಕಳ ಪುರಸಭೆ ಹಾಗೂ ತಾಲೂಕಾಡಳಿತ ಜಂಟಿ ಸರ್ವೇ ನಡೆಸಿ ಸಮಸ್ಯೆಯನ್ನು ಶ್ರೀ ಬಗೆಹರಿಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನಕಾರರು ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಅವರಿಗೆ ಮನವಿ ಸಲ್ಲಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಅವಿನಾಶ್ ಶೆಟ್ಟಿ, ರತ್ನಾಕರ ಅಮೀನ್, ಪ್ರಕಾಶ್ ರಾವ್, ವಾಜಿ ಪುರಸಭಾ ಸದಸ್ಯೆ ಮೀನಾಕ್ಷಿ ಮೊದಲಾದವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net