ಕಾರ್ಮಿಕರ ಇಎಸ್‌ಐ ಸೌಲಭ್ಯಕ್ಕೆ ಆಗ್ರಹಿಸಿ ಧರಣಿ

ವಿವಿಧ ಬೇಡಿಕೆ ಮುಂದಿರಿಸಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವಿವಿಧ ಕಾರ್ಮಿಕ ಸಂಘಟನೆಗಳ ಒಕ್ಕೂಟ ವತಿಯಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ.
ವಿವಿಧ ಬೇಡಿಕೆ ಮುಂದಿರಿಸಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವಿವಿಧ ಕಾರ್ಮಿಕ ಸಂಘಟನೆಗಳ ಒಕ್ಕೂಟ ವತಿಯಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ.
Published on


ಸುಳ್ಯ:ಕಾರ್ಮಿಕರವಿವಿಧ ಬೇಡಿಕೆಗಳನ್ನು ಮುಂದಿರಿಸಿಕರ್ನಾಟಕ ಅರಣ್ಯ ಅಭಿವೃದ್ಧಿನಿಗಮದ ವಿವಿಧ ಕಾರ್ಮಿಕ ಸಂಘಟನೆಗಳಒಕ್ಕೂಟ ವತಿಯಿಂದ ಅನಿರ್ಧಿಷ್ಟಾವಧಿಪ್ರತಿಭಟನೆ ಮತ್ತು ಧರಣಿ ಸತ್ಯಾಗ್ರಹಆರಂಭಗೊಂಡಿದೆ.

ಕರ್ನಾಟಕಅರಣ್ಯ ಅಭಿವೃದ್ಧಿ ನಿಗಮದಸುಳ್ಯ-ಐವರ್ನಾಡು-ಸುಬ್ರಹ್ಮಣ್ಯವಿಭಾಗದ ರಬ್ಬರ್ ವಿಭಾಗದಲ್ಲಿಕೆಲಸ ನಿರ್ವಹಿಸುತ್ತಿರುವಕಾರ್ಮಿಕರು ವಿವಿಧ ಬೇಡಿಕೆಮುಂದಿರಿಸಿ ಸುಳ್ಯದ ವಿಭಾಗೀಯವ್ಯವಸ್ಥಾಪಕರ ಕಚೇರಿ ಮುಂಭಾಗದಲ್ಲಿಪ್ರತಿಭಟನೆ ನಡೆಸುತ್ತಿದ್ದಾರೆ.

ನಿಗಮದಲ್ಲಿಶೇ.60ರಷ್ಟುನಿರಂತರ ಕಾರ್ಮಿಕರು ಕೆಲಸನಿರ್ವಹಿಸುತ್ತಿದ್ದು,ಈಕಾರ್ಮಿಕರನ್ನು ಕಾಯಂಗೊಳಿಸಬೇಕುಮತ್ತು ಬಾಕಿ ವೇತನ ಪಾವತಿಸಬೇಕು,ಕಾರ್ಮಿಕರಕುಟುಂಬದ ಸದಸ್ಯರಿಗೆ ಅನುಕಂಪಆಧಾರಿತ ಕೆಲಸ ನೀಡಬೇಕು.ಮೇಸ್ತ್ರಿಕಾರ್ಮಿಕರ ನೇಮಕಾತಿ ಮಾಡಬೇಕು,ಎಲ್ಲಕಾರ್ಮಿಕರಿಗೆ ಇಎಸ್‌ಐ ಸೌಲಭ್ಯಮತ್ತಿತರ ಬೇಡಿಕೆ ಮುಂದಿರಿಸಿಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಜನರಲ್ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷಜೀವರತ್ನ,ಪ್ರಧಾನಕಾರ್ಯದರ್ಶಿ ಕ್ರೂಸ್ ನಾಗಪಟ್ಟಣ,ಉಪಾಧ್ಯಕ್ಷಭೋಜರಾಜ ಕಣಿಯಾರು,ಕರ್ನಾಟಕತೋಟ ಮಜ್ದೂರ್ ಸಂಘ ಅಧ್ಯಕ್ಷಸುಂದರಲಿಂಗಂ,ಕೆಎಫ್‌ಡಿಸಿಲೇಬರರ್ಸ್ ಯೂನಿಯನ್ ಅಧ್ಯಕ್ಷಶರತ್ ಕುಮಾರ್,ಕಾರ್ಮಿಕಸಂಘಟನೆಗಳ ಪ್ರಮುಖರಾದ ಕಾರ್ತಿಕ್ಕೂಟೇಲು,ಶಶಿಕುಮಾರ್ನೆಟ್ಟಾರು,ರವೀಂದ್ರನ್ನೇತೃತ್ವ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net