

ಕುಂದಾಪುರ:ತ್ರಾಸಿಗ್ರಾಮ ಪಂಚಾಯಿತಿ ವ್ಯಾಪ್ತಿಯಆನಗೋಡು ಎಂಬಲ್ಲಿ ಸೌಪರ್ಣಿಕಾ ನದಿಯಲ್ಲಿ ಮರಳು ತೆಗೆಯುತ್ತಿರುವುದನ್ನುವಿರೋಧಿಸಿ ಸ್ಥಳೀಯರು ಗುರುವಾರಪ್ರತಿಭಟನೆ ನಡೆಸಿದರು.
ಸೌಪರ್ಣಿಕಾನದಿಯಿಂದ ಮರಳಿನ ದಿಬ್ಬ ತೆರವುಗೊಳಿಸಲುಬಂದರು ಮತ್ತು ಮೀನುಗಾರಿಕೆ ಇಲಾಖೆಮೂಲಕ ಪರವಾನಗಿ ನೀಡಲಾಗಿದೆ.ಆದರೆಈ ಪ್ರದೇಶದಲ್ಲಿ ಪ್ರಸ್ತುತನೈಸರ್ಗಿಕವಾಗಿ ಯಾವುದೇ ಮರಳಿನದಿಬ್ಬ ರಚನೆಯಾಗಿಲ್ಲ.ಆದರೂಪರವಾನಗಿ ಪಡೆದ ಗುತ್ತಿಗೆದಾರರುಹೊರ ರಾಜ್ಯದಿಂದ ಕಾರ್ಮಿಕರನ್ನುಕರೆಸಿ ಆಳವಾಗಿ ಮರಳು ತೆಗೆಯುತ್ತಿರುವುದರಿಂದನದಿ ತೀರದ ದಂಡೆ,ತೆಂಗಿನಮರಗಳು ಮತ್ತು ನೀರಿನ ಮೋಟರ್ಶೆಡ್‌ಗೆ ಹಾನಿಯಾಗಿದೆ.ಕೂಡಲೇಈ ಭಾಗದಲ್ಲಿ ಮರಳುಗಾರಿಕೆನಿಲ್ಲಿಸುವಂತೆ ಪ್ರತಿಭಟನಾಕಾರರುಆಗ್ರಹಿಸಿದರು.
ಕಿರಿದಾದರಸ್ತೆಯಲ್ಲಿ ಪ್ರತಿನಿತ್ಯ ಮರಳುತುಂಬಿದ ವಾಹನಗಳು ಸಂಚರಿಸುತ್ತಿದ್ದುಸ್ಥಳೀಯರು ತೀವ್ರ ತೊಂದರೆಅನುಭವಿಸುತ್ತಿದ್ದಾರೆ.ಸಂಬಂಧಪಟ್ಟಇಲಾಖೆ ಅಧಿಕಾರಿಗಳು ಸ್ಥಳಕ್ಕೆಭೇಟಿ ನೀಡಿ ಮರಳುಗಾರಿಕೆಸ್ಥಗಿತಗೊಳಿಸುವರೆಗೆ ಪ್ರತಿಭಟನೆಮುಂದುವರಿಸುವುದಾಗಿ ಪ್ರತಿಭಟನಾಕಾರರುಪಟ್ಟು ಹಿಡಿದರು.ತ್ರಾಸಿಗ್ರಾಮ ಪಂಚಾಯಿತಿ ಕಾರ್ಯದರ್ಶಿಶೋಭಾ ಮನವಿ ಸ್ವೀಕರಿಸಿ,ಸಂಬಂಧಪಟ್ಟಇಲಾಖೆಗೆ ತಿಳಿಸುವುದಾಗಿ ಭರವಸೆನೀಡಿದರು.
ತ್ರಾಸಿಗ್ರಾಪಂ ಅಧ್ಯಕ್ಷ ಮಿಥುನ್ ದೇವಾಡಿಗ,ಸ್ಥಳೀಯಮುಖಂಡರಾದ ರವೀಂದ್ರ ಖಾರ್ವಿಹೊಸಪೇಟೆ,ರವಿಶೆಟ್ಟಿಗಾರ್,ಅಂತೋನಿ,ಲಕ್ಷ್ಮೀಕಾಂತ,ಶರತ್,ಸುಧೀರ್,ಕಿರಣ್,ವಿವೇಕ,ಯತೀಶ್,ನಿತೀಶ್,ವಿಲ್ಪ್ರೆಡ್,ಸ್ಥಳೀಯಮಹಿಳೆಯರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.