ಜಲಮೂಲಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ

ಕೋಡಿಯ ಬ್ಯಾರಿಸ್​ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸ್ವಚ್ಛ ಕಡಲ ತೀರ- ಹಸಿರು ಕೋಡಿ 46ನೇ ಅಭಿಯಾನ ನಡೆಯಿತು. ಪ್ರಮುಖರಾದ ಕೆ.ಎಂ.ಅಬ್ದುಲ್​ ರೆಹಮಾನ್​ ಬ್ಯಾರಿ, ಡಾ.ಆಸೀಫ್​ ಬ್ಯಾರಿ, ಗೋಪಾಲ ಪೂಜಾರಿ ಮೊದಲಾದವರಿದ್ದರು
ಕೋಡಿಯ ಬ್ಯಾರಿಸ್​ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸ್ವಚ್ಛ ಕಡಲ ತೀರ- ಹಸಿರು ಕೋಡಿ 46ನೇ ಅಭಿಯಾನ ನಡೆಯಿತು. ಪ್ರಮುಖರಾದ ಕೆ.ಎಂ.ಅಬ್ದುಲ್​ ರೆಹಮಾನ್​ ಬ್ಯಾರಿ, ಡಾ.ಆಸೀಫ್​ ಬ್ಯಾರಿ, ಗೋಪಾಲ ಪೂಜಾರಿ ಮೊದಲಾದವರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಕೆ.ಎಂ.ಅಬ್ದುಲ್​ ರೆಹಮಾನ್​ ಬ್ಯಾರಿ ಕಿವಿಮಾತು
  • ಸ್ವಚ್ಛ ಕಡಲ ತೀರ- ಹಸಿರು ಕೋಡಿ 46ನೇ ಅಭಿಯಾನ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕಡಲು ಕೇವಲ ಮೀನುಗಳಿರುವ ಜಾಗವಲ್ಲ. ಬದಲಾಗಿ ಅದು ಜಲಚರ ಜೀವಸಂಕುಲಕ್ಕೆ ಆಧಾರ ಸ್ತಂಭ. ನಮ್ಮ ಊರಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪುಣ್ಯದ ಕೆಲಸವಾಗಿದೆ. ಜಲಮೂಲಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿರುವುದು ಶ್ಲಾಘನೀಯ ಎಂದು ಬ್ಯಾರಿಸ್​ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ಅಬ್ದುಲ್​ ರೆಹಮಾನ್​ ಬ್ಯಾರಿ ಹೇಳಿದರು.
ಕೋಡಿ ಬ್ಯಾರಿಸ್​ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ 'ಸ್ವಚ್ಛ ಕಡಲ ತೀರ- ಹಸಿರು ಕೋಡಿ' 46ನೇ ಅಭಿಯಾನದಲ್ಲಿ ಮಾತನಾಡಿದರು.
ಬ್ಯಾರಿಸ್​ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿ ಸದಸ್ಯ ಡಾ.ಆಸೀಫ್​ ಬ್ಯಾರಿ, ಕೋಡಿ ಶ್ರೀ ಚಕ್ರೇಶ್ವರಿ ದೇವಸ್ಥಾನದ ಧರ್ಮದರ್ಶಿ ಗೋಪಾಲ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಪ್ರಭಾಕರ್​ ಶೇರಿಗಾರ್​, ಅಷ್ಪಾಕ್​, ಬ್ಯಾರಿಸ್​ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಮುಖ್ಯಸ್ಥರು, ಸಂಸ್ಥೆಯ ಬೋಧಕ - ಬೋಧಕೇತರ ಸಿಬ್ಬಂದಿ ಮತ್ತು ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಂಡರು. ಕನ್ನಡ ಉಪನ್ಯಾಸಕಿ ಸುಮನಾ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net