

ಕಾಸರಗೋಡು: ಮೀನು ಮಾರಾಟ ಅಂಗಡಿಯಿಂದ ನಗದು, ಮೀನು ಸೇರಿದಂತೆ ವಿವಿಧ ಸೊತ್ತುಗಳನ್ನು ಕಳವು ನಡೆಸಲಾಗಿದೆ.
ತಲಪ್ಪಾಡಿಯಲ್ಲಿರುವ ಮೀನಿನ ಅಂಗಡಿಯಿಂದ ಈ ಕಳವು ನಡೆದಿದ್ದು ಮೀನುಗಳಿದ್ದ ಎರಡು ಫ್ರೀಜರ್, ಐದು ಫೈಬರ್ ಪೆಟ್ಟಿಗೆಗಳು, ಬಕೆಟ್‌ನಲ್ಲಿದ್ದ 5 ಸಾವಿರ ರೂ. ಹಾಗೂ 4 ಚಾಕುಗಳನ್ನು ಕಳವು ನಡೆಸಲಾಗಿದೆ.
ಇದರಿಂದ ಸುಮಾರು 1.40 ಲಕ್ಷ ರೂ. ನಷ್ಟ ಉಂಟಾಗಿರುವುದಾಗಿ ಅಂಗಡಿ ಪಾಲುದಾರ ಬಂಗ್ರಮಂಜೇಶ್ವರ ಕಡಿಗಾರ್ ಹೌಸ್‌ನ ಮೊಹಮ್ಮದ್ ರಫೀಕ್(37) ಎಂಬುವರು ನೀಡಿದ ದೂರಿನನ್ವಯ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆ.11ರಂದು ರಾತ್ರಿ 11 ಗಂಟೆಯಿಂದ 12ರ ಬೆಳಗ್ಗೆ 10ರ ನಡುವೆ ಅಂಗಡಿಯಿಂದ ಕಳವು ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.