ವಿದ್ಯುತ್ ಕಂಬಗಳಿಗೆ ಅಳವಡಿಕೆ ವಾಡಿರುವ ಕೇಬಲ್‌ಗಳ ಕೆಲವು ಕಡೆ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಕಂಬಗಳು ಬಿದ್ದಾಗ ಕೇಬಲ್‌ಗಳು ರಸ್ತೆಯಲ್ಲಿ ಇರುತ್ತವೆ. ಇದರಿಂದ ಅಪಘಾತಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ. ಸೂಕ್ತ ನಿರ್ವಹಣೆ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಹೆಬ್ರಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ್ ಸೇರಿಗಾರ ಒತ್ತಾಯಿಸಿದರು.
ಹೆಬ್ರಿಯಲ್ಲಿ ಮೆಸ್ಕಾಂ ಉಪ ವಿಭಾಗದ ವತಿಯಿಂದ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ನಾಡ್ಪಾಲು ಗ್ರಾಮದ ಬಡತಿಂಗಳೆ, ತಮ್ಲಬಿಯಲ್ಲಿ ಲೋ ವೋಲ್ಟೇಜ್ ಸಮಸ್ಯೆಯಲ್ಲಿ ವಿದ್ಯುತ್ ತೊಂದರೆಯಾಗಿದೆ. ಇದರ ಬಗ್ಗೆ ಕ್ರಮ ಜರುಗಿಸಲು ಸಾರ್ವಜನಿಕರು ಒತ್ತಾಯಿಸಿದರು. ಸೋಮೇಶ್ವರ ಪೇಟೆಯಲ್ಲಿ ಚರಂಡಿಯಲ್ಲಿ ವಿದ್ಯುತ್ ಕಂಬ ಇದೇ, ತೆರವು ಮಾಡಬೇಕಾಗಿ ವೆಂಕಟೇಶ್ ಮನವಿ ಮಾಡಿದರು.
ಮಳೆಗಾಲಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಇಲಾಖೆ ಮಾಡಿಕೊಂಡು, ಜನರ ಕೆಲಸವನ್ನು ಆದ್ಯತೆ ನೆಲೆಯಲ್ಲಿ ಮಾಡಿಕೊಡಬೇಕು. ಕೆಲವೆಡೆ ಇರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಗುವುದು. ಹೆಬ್ರಿಯಲ್ಲಿ ಉತ್ತಮ ತಂಡ ಇರುವುದರಿಂದ ಕೆಲಸಗಳು ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ.